ಲಿಂಗಾಯತ ಧರ್ಮ ಹೋರಾಟದಿಂದ ಚುನಾವಣೆ ಮೇಲೆ ಯಾವುದೇ ಎಫೆಕ್ಟ್ ಆಗಿಲ್ಲ : ಎಂ.ಬಿ ಪಾಟೀಲ್

ವಿಜಯಪುರ : ವಿಜಯಪುರದಲ್ಲಿ ಮಾಜಿ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ ಸುದ್ದಿಗೋಷ್ಠಿ ನಡೆಸಿದ್ದಾರೆ. ‘ ಜಿಲ್ಲೆಯಲ್ಲಿ ಮಳೆ ಅಭಾವ, ಈ ಕುರಿತು ಸಚಿವ ಡಿ ಕೆ ಶಿವಕುಮಾರ್ ಹಾಗೂ ಆರೋಗ್ಯ ಸಚಿವ ಶಿವಾನಂದ ಪಾಟೀಲ ಜೊತೆಗೆ ಮಾತನಾಡಿದ್ದೇನೆ. ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಎಲ್ಲ ಕೆರೆ, ಕೆನಾಲ್ ಗಳಿಗೆ ನೀರು ಬಿಡುವಂತೆ ಮನವಿ ಮಾಡಿದ್ದೇನೆ. ಆಲಮಟ್ಟಿ ಡ್ಯಾಂ ನಿಂದ ಕೆನಾಲ್ ಗಳಿಗೆ ನೀರು ಬಿಡುಗಡೆ ಮಾಡುವಂತೆ ಕೇಳಿ ಪತ್ರ ಕೂಡ ಬರೆದಿದ್ದೇನೆ. ನಾಳೆ ಈ ಕುರಿತು ಸಭೆ ಕರೆಯಲಾಗಿದೆ ‘ ಎಂದಿದ್ದಾರೆ.

ಬಜೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು ‘ ಹಿಂದಿನ ಬಜೆಟ್ ನ ಎಲ್ಲ ಯೋಜನೆಗಳು ಮುಂದುವರೆಯಲಿವೆ. ಸಿದ್ದರಾಮಯ್ಯ ಮಂಡನೆ ಮಾಡಿದ ಬಜೆಟ್ ಮುಂದುವರೆಯುತ್ತದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ‘ ಎಂದು ಹೇಳಿದ್ದಾರೆ.

ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ವಿಚಾರವಾಗಿ ಮಾತನಾಡಿದ ಅವರು ‘ ಉ.ಕರ್ನಾಟಕ ಸಂಪೂರ್ಣ ಅಭಿವೃದ್ದಿ ಆಗಬೇಕು. ಬಹಳ ಕಷ್ಟಪಟ್ಟು ಅಖಂಡ ಕರ್ನಾಟಕ ನಿರ್ಮಾಣ ಮಾಡಲಾಗಿದೆ. ಇದು ಪ್ರತ್ಯೇಕವಾಗೋದು ಸರಿಯಲ್ಲ. ನಾವು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡಲ್ಲ ‘ ಎಂದರು.

ಪ್ರತ್ಯೇಕ ಲಿಂಗಾಯತ ವಿಚಾರವಾಗಿ ಮಾತನಾಡಿದ ಎಂ.ಬಿ ಪಾಟೀಲ್ ‘ ಲಿಂಗಾಯತ ಅನ್ನೋದು ನಮ್ಮ ಅಸ್ಮಿತೆಯ ವಿಚಾರ. ಲಿಂಗಾಯತ ಅನ್ನೋದು ಜೈನ, ಬೌದ, ಶಿಖ್ ತರ ಪ್ರತ್ಯೇಕ ಧರ್ಮ. ಈ ಬಗ್ಗೆ ಬೇರು ಮಟ್ಟದಿಂದ ಜಾಗೃತಿ ಮೂಡಿಸಲಿದ್ದೇವೆ. ವೀರಶೈವ ಸ್ವತಂತ್ರ ಧರ್ಮವಾದ್ರೆ ಅವ್ರು ಮುಂದುವರೆಸಿಕೊಂಡು ಹೋಗಲಿ. ಪ್ರತ್ಯೇಕ ವೀರಶೈವ ಮಾಡಿಕೊಳ್ಳಲಿ. ಅವರ ಬಗ್ಗೆ ನಮಗೆ ಗೌರವವಿದೆ. ಸಧ್ಯ ಪ್ರತ್ಯೇಕ ಲಿಂಗಾಯತ ಹೋರಾಟ ಮುಂದುವರೆಯುತ್ತದೆ ‘ ಎಂದಿದ್ದಾರೆ.

ಲಿಂಗಾಯತ ಹೋರಾಟದಿಂದ ಚುನಾವಣೆ ಮೇಲೆ ಪರಿಣಾವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ‘ ಲಿಂಗಾಯತ ಹೋರಾಟದಿಂದ ಯಾವುದೇ ಎಫೆಕ್ಟ ಆಗಿಲ್ಲ. ಅಹಿಂದ ಅಭ್ಯರ್ಥಿಗಳಿಗಿಂತ ಲಿಂಗಾಯತ ಅಭ್ಯರ್ಥಿಗಳು ಹೆಚ್ಚಾಗಿ ಗೆದ್ದು ಬಂದಿದ್ದಾರೆ. ಯಾವ ಕಾರಣದಿಂದ ಯಾರು, ಯಾರು ಸೋತಿದ್ದಾರೆ ಅನ್ನೋದರ ಬಗ್ಗೆ ಪಕ್ಷದ ಒಳಗೆ ಚರ್ಚೆಯಾಗಲಿದೆ. ಅಲ್ಲಿ ನಾವು ಕೂಡ ನಮ್ಮ ವಿಚಾರ ಮಂಡಣೆ ಮಾಡಲಿದ್ದೇವೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com