ಕುಮಾರಸ್ವಾಮಿ ಹೇಳಿರುವಂತೆ ನಾವು ಅವರಿಗೆ ವಿಷ ಕೊಟ್ಟಿಲ್ಲ : ಮಾಜಿ ಸಚಿವ ಎ. ಮಂಜು ಟಾಂಗ್

ಕುಮಾರಸ್ವಾಮಿ ಕಣ್ಣೀರು ಹಾಕಿದಕ್ಕೆ ಮೈಸೂರಿನ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎ.ಮಂಜು ಟಾಂಗ್ ನೀಡಿದ್ದಾರೆ. ‘ ಕುಮಾರಸ್ವಾಮಿ ಹೇಳಿರುವಂತೆ ನಾವು ಅವರಿಗೆ ವಿಷ ಕೊಟ್ಟಿಲ್ಲ.! ಅವರು ಕೇಳಿದ ಪ್ರಮುಖ ಖಾತೆಗಳನ್ನೇ ಕೊಟ್ಟಿದ್ದೇವೆ. ಕಾಂಗ್ರೆಸ್ ನಾಯಕರು, ಶಾಸಕರು ತಪ್ಪು ಮಾಡಿರೋ ರೀತಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿರುವುದು ಸರಿಯಲ್ಲ ‘ ಎಂದಿದ್ದಾರೆ.

‘ ಅವರ ಇತ್ತೀಚಿನ ಹೇಳಿಕೆಗಳಿಂದಾಗಿ ನೋವಾಗಿದೆ. ಓರ್ವ ಕಾಂಗ್ರೆಸ್ಸಿಗನಾಗಿ ನನಗೆ ನೋವಾಗಿದೆ ‘ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಹೆಚ್ಡಿಕೆ ವಿರುದ್ಧ ಮಂಜು ನೋವಿನ ಬಾಣ ಬಿಟ್ಟಿದ್ದಾರೆ.

Leave a Reply

Your email address will not be published.