ಕೋಲಾರ : ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಶಾಸಕ ಕೆ.ವೈ ನಂಜೇಗೌಡ ಅವಿರೋಧ ಆಯ್ಕೆ

ಕೋಲಾರ : ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನೂತನ ಅಧ್ಯಕ್ಷ ರಾಗಿ ಮಾಲೂರು ಶಾಸಕ ಕೆವೈ ನಂಜೇಗೌಡ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳ ಮೈತ್ರಿ ಪಕ್ಷಗಳ ಹಾಗೂ ಸಿಎಂ ಕುಮಾರಸ್ವಾಮಿ ಮೌಖಿಕ ಸೂಚನೆಯಂತೆ ಆಯ್ಕೆ ಮಾಡಲಾಗಿದೆ.

ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್ ನಿಂದ ರಾಮಕೃಷ್ಣೆಗೌಡ ಕಾಂಗ್ರೆಸ್ ನಿಂದ ಶಾಸಕ ಕೆವೈ ನಂಜೇಗೌಡ ನಾಮಪತ್ರ ಸಲ್ಲಿಸಿದ್ದರು.

ಸಿಎಂ ಹೆಚ್ ಡಿ .ಕುಮಾರಸ್ವಾಮಿ ದೂರವಾಣಿ ಕರೆ ಮೇಲೆ ಜೆಡಿಎಸ್ ನ ರಾಮಕೃಷ್ಣೆಗೌಡ ನಾಮಪತ್ರ ವಾಪಸ್ಸು ಪಡೆಯಲು ನಿರ್ಧಾರ ಹಿನ್ನಲೆ ಅವಿರೋಧ ವಾಗಿ ಶಾಸಕ ನಂಜೇಗೌಡ ಆಯ್ಕೆ ಯಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com