FIFA 2018 : ಫ್ರಾನ್ಸ್ ಮುಡಿಗೆ ವಿಶ್ವಕಪ್ ಕಿರೀಟ : ಫೈನಲ್‍ನಲ್ಲಿ ಕ್ರೊವೇಷ್ಯಾಗೆ ನಿರಾಸೆ

ಫ್ರಾನ್ಸ್ ಫುಟ್ಬಾಲ್ ತಂಡ 2ನೇ ಬಾರಿ ಫಿಫಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಷ್ಯಾದ  ರವಿವಾರ ಲುಝ್ನಿಕಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಕ್ರೊವೇಷ್ಯಾ ವಿರುದ್ಧ 4-2 ಗೋಲುಗಳ ಅಂತರದ ಜಯ ಸಾಧಿಸಿ ಟ್ರೋಫಿಯನ್ನು ಎತ್ತಿಹಿಡಿದಿದೆ.

18ನೇ ನಿಮಿಷದಲ್ಲಿ ಕ್ರೊವೇಷ್ಯಾ ಆಟಗಾರ ಮಾರಿಯೊ ಮ್ಯಾಂಡ್ ಜುಯಿಕ್ ಓನ್ ಗೋಲ್ (Own Goal) ಪ್ರಮಾದ ಎಸಗಿದ್ದರಿಂದ ಫ್ರಾನ್ಸ್ ಪರವಾಗಿ ಮೊದಲ ಗೋಲ್ ದಾಖಲಾಯಿತು. 28ನೇ ನಿಮಿಷದಲ್ಲಿ ಕ್ರೊವೇಷ್ಯಾದ ಇವಾನ್ ಪೆರಿಸಿಕ್ ಬಾರಿಸಿದ ಗೋಲ್ ನಿಂದ ಉಭಯ ತಂಡಗಳ ಸ್ಕೋರ್ 1-1 ರಿಂದ ಸಮವಾಯಿತು.

38ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಿಕ್ ಅನ್ನು ಫ್ರಾನ್ಸಿನ ಆ್ಯಂಟೋನಿ ಗ್ರೀಜ್ಮನ್ ಗೋಲ್ ಆಗಿ ಪರಿವರ್ತಿಸಿದರು. ಬಳಿಕ ಫ್ರಾನ್ಸ್ ಪರವಾಗಿ ಪಾಲ್ ಪೊಗ್ಬಾ (59″) ಕೈಲಿಯನ್ ಎಮ್ ಬಾಪ್ಪೆ (65″) ಗೋಲ್ ದಾಖಲಿಸಿದರು. ಕ್ರೊವೇಷ್ಯಾ ಪರವಾಗಿ ಮಾರಿಯೊ ಮ್ಯಾಂಡ್ ಜುಯಿಕ್ 69ನೇ ನಿಮಿಷದಲ್ಲಿ ಗೋಲ್ ಬಾರಿಸಿದರು. ಅಂತಿಮವಾಗಿ ಫ್ರಾನ್ಸ್ 4-2 ರಿಂದ ಗೆದ್ದು ಎರಡನೇ ಬಾರಿ ವಿಶ್ವಕಪ್ ತನ್ನದಾಗಿಸಿಕೊಂಡಿತು.

1998ರಲ್ಲಿ ತವರಿನಲ್ಲಿ ನಡೆದಿದ್ದ ವಿಶ್ವಕಪ್ ನಲ್ಲಿ ಫ್ರಾನ್ಸ್ ಮೊದಲ ಬಾರಿ ಚಾಂಪಿಯನ್ ಆಗಿತ್ತು. ಇದೀಗ 20 ವರ್ಷಗಳ ನಂತರ 2ನೇ ಸಲ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ. ಮೊದಲ ಬಾರಿ ಫುಟ್ಬಾಲ್ ವಿಶ್ವಕಪ್ ಜಯಿಸುವ ಕ್ರೊವೇಷ್ಯಾ ತಂಡದ ಕನಸು ಭಗ್ನಗೊಂಡಿದೆ.

Leave a Reply

Your email address will not be published.