ಇಂಡೋನೇಷ್ಯಾ : ವ್ಯಕ್ತಿಯ ಸಾವಿಗೆ ಗ್ರಾಮಸ್ಥರ ಸೇಡಿನ ದಾಳಿ : 292 ಮೊಸಳೆಗಳ ಮಾರಣಹೋಮ..!

ವ್ಯಕ್ತಿಯೊಬ್ಬನ ಸಾವಿನಿಂದ ಉದ್ರಿಕ್ತಗೊಂಡ ಜನರ ಗುಂಪೊಂದು ನಡೆಸಿದ ಸೇಡಿನ ದಾಳಿಯಲ್ಲಿ 292 ಮೊಸಳೆಗಳು ಮೃತಪಟ್ಟಿರುವ ಘಟನೆ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದಿದೆ. ಮೊಸಳೆಗಳನ್ನು ಸಾಕುವ ಫಾರ್ಮ್ ಒಳಗೆ ಆಕಸ್ಮಿಕವಾಗಿ ಪ್ರವೇಶಿಸಿದ 48 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ ಮೇಲೆ ದಾಳಿ ಮೊಸಳೆ ಕೊಂದು ಹಾಕಿತ್ತು.

ವ್ಯ್ಕತಿಯ ಸಾವಿನಿಂದ ಉದ್ರಿಕ್ತಗೊಂಡ ಗ್ರಾಮಸ್ಥರು ಪ್ರತೀಕಾರವಾಗಿ ಮೊಸಳೆಗಳ ಫಾರ್ಮ್ ಮೇಲೆ ಸೇಡಿನ ದಾಳಿ ನಡೆಸಿದ್ದಾರೆ. ಪೂರ್ವ ಇಂಡೋನೇಷ್ಯಾದ ಸೊರೊಂಗ್ ಜಿಲ್ಲೆಯ ಪಶ್ಚಿಮ ಪಪುವಾ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದ್ದು. ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮುಗಿಸಿದ ಬಳಿಕ ಜನರು ಮೊಸಳೆಗಳನ್ನು ಕೊಂದು ಹಾಕಿದ್ದಾರೆ.

 

One thought on “ಇಂಡೋನೇಷ್ಯಾ : ವ್ಯಕ್ತಿಯ ಸಾವಿಗೆ ಗ್ರಾಮಸ್ಥರ ಸೇಡಿನ ದಾಳಿ : 292 ಮೊಸಳೆಗಳ ಮಾರಣಹೋಮ..!

Leave a Reply

Your email address will not be published.

Social Media Auto Publish Powered By : XYZScripts.com