ಭಟ್ಕಳ : ಇದ್ದಕ್ಕಿದ್ದಂತೆ ಉರುಳಿ ಬಿದ್ದ ಬಸ್ ಸ್ಟ್ಯಾಂಡ್ ಕಟ್ಟಡ : ಅದೃಷ್ಟವಶಾತ್ ಪಾರಾದ ಪ್ರಯಾಣಿಕರು..!

ಶಿರಸಿ : ಬಸ್ ಸ್ಟಾಂಡ್ ಕಟ್ಟಡವೊಂದು ಪ್ರಯಾಣಿಕರು ನೋಡ ನೋಡುತ್ತಿದ್ದಂತೆ ಉರುಳಿ ಬಿದ್ದ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸಂಭವಿಸಿದೆ. ಭಟ್ಕಳದ ಬಸ್ ಸ್ಟಾಂಡ್ ತುಂಬಾ ಹಳೆಯದ್ದಾಗಿತ್ತು. ನಲವತ್ತು ವರ್ಷಗಳ ಹಿಂದೆ ಕಟ್ಟಲಾಗಿದ್ದ ಕಟ್ಟಡ ಇದ್ದಾಗಿತ್ತು.

ಮುಂಜಾನೆ ಇದ್ದಕ್ಕಿದ್ದಂತೆ ಬಸ್ ಸ್ಟಾಂಡ್ ನ ಗೋಡೆ ಬಿರುಕು ಬಿಟ್ಟಿದೆ. ಇದನ್ನು ಗಮನಿಸಿದ ಪೊಲೀಸ್ ರು ಬಸ್ ಸ್ಟಾಂಡ್ ನಲ್ಲಿದ್ದ ಪ್ರಯಾಣಿಕರನ್ನು ಹೊರಗೆ ಹಾಕಿದ್ದರು. ಬಳಿಕ ಇದ್ದಕ್ಕಿದ್ದಂತೆ ಬಸ್ ಸ್ಟಾಂಡ್ ಕಟ್ಟಡ ಉರುಳಿ ಬಿತ್ತು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಇನ್ನು ಬಸ್ ನಿಲ್ದಾಣ ಕಟ್ಟಡ ಉರುಳಿ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Leave a Reply

Your email address will not be published.