Football world cup : ಫ್ರಾನ್ಸ್ ಹಾಗೂ ಕ್ರೊವೇಷ್ಯಾ – ಅಂತಿಮ ಹಣಾಹಣಿುಲ್ಲಿ ಗೆಲುವು ಯಾರಿಗೆ…

ರಷ್ಯಾದಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವಕಪ್ ಮಹಾಸಮರ ತನ್ನ ಕೊನೆಯ ಹಂತ ತಲುಪಿದ್ದು, ರವಿವಾರ ಲುಝ್ನಿಕಿ ಕ್ರೀಡಾಂಗಣದಲ್ಲಿ ಫ್ರಾನ್ಸ್ ಹಾಗೂ ಕ್ರೊವೇಷ್ಯಾ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಉಭಯ ತಂಡಗಳು ಅಂತಿಮ ಹಣಾಹಣಿಯಲ್ಲಿ ಗೆದ್ದು ಟ್ರೋಫಿಯನ್ನು ತಮ್ಮದಾಗಿಸಿಕೊಳ್ಳುವ ತವಕದಲ್ಲಿವೆ.


ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡದ ವಿರುದ್ಧ 1-0 ಗೋಲುಗಳ ಅಂತರದಿಂದ ಜಯ ಸಾಧಿಸಿದ ಫ್ರಾನ್ಸ್ ವಿಶ್ವಕಪ್ ಫೈನಲ್ ಗೆ ಅಡಿಯಿಟ್ಟಿದೆ. ತವರು ನೆಲದಲ್ಲಿ ನಡೆದಿದ್1998 ರ ವಿಶ್ವಕಪ್ ನಲ್ಲಿ ಫ್ರಾನ್ಸ್ ಮೊದಲ ಬಾರಿ ವಿಶ್ವಚಾಂಪಿಯನ್ ಅಗಿತ್ತು.

ಇದೀಗ ಫ್ರಾನ್ಸ್ ಎರಡನೇ ಸಲ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ಕನಸಿನಲ್ಲಿದೆ. ಪ್ರಮುಖ ಆಟಗಾರರಾದ ಅ್ಯಂಟೋನಿ ಗ್ರೀಸ್ಮನ್, ಪಾಲ್ ಪೊಗ್ಬಾ, ಕೈಲಿಯನ್ ಎಮ್ ಬಾಪ್ಪೆ ಫ್ರಾನ್ಸ್ ತಂಡದ ಬಲ ಎನಿಸಿದ್ದಾರೆ.

ಇನ್ನೊಂದೆಡೆ ಕ್ರೊವೇಷ್ಯಾ ತಂಡ ಸೆಮಿಫೈನಲ್ ಪಂದ್ಯದಲ್ಲಿ ಹ್ಯಾರಿ ಕೇನ್ ನೇತೃತ್ವದ ಇಂಗ್ಲೆಂಡ್ ತಂಡವನ್ನು 2-1 ಗೋಲುಗಳ ಅಂಯರದಿಂದ ಮಣಿಸಿ ಮೊದಲ ಬಾರಿ ಫೈನಲ್ ಗೆ ಲಗ್ಗೆಯಿಟ್ಟಿದೆ. ಲುಕಾ ಮೊಡ್ರಿಕ್, ಇವಾನ್ ಪೆರಸಿಕ್ ಹಾಗೂ ಇವಾನ್ ರ್ಯಾಕಿಟಿಕ್ ಕ್ರೊವೇಷ್ಯಾ ತಂಡದ ಪ್ರಮುಖರಾಗಿದ್ದಾರೆ. ರವಿವಾರ ಫೈನಲ್ ಪಂದ್ಯದಲ್ಲಿ ಫ್ರಾನ್ಸ್  ವಿರುದ್ಧ ಕ್ರೊವೇಷ್ಯಾ ಗೆದ್ದರೆ ಮೊದಲ ಬಾರಿ ಫುಟ್ಬಾಲ್ ವಿಶ್ವ ಚಾಂಪಿಯನ್ ಎನಿಸಿಕೊಳ್ಳಲಿದೆ.

Leave a Reply

Your email address will not be published.

Social Media Auto Publish Powered By : XYZScripts.com