6 ತಿಂಗಳ ಬಳಿಕ ಸಂಚಾರಕ್ಕೆ ಮುಕ್ತವಾದ ಶಿರಾಡಿಘಾಟ್ ರಸ್ತೆಯಲ್ಲಿ ಹೆಚ್.ಡಿ ರೇವಣ್ಣನ ‘ವಾಸ್ತು’..

ರಸ್ತೆ ಉದ್ಘಾಟನೆ ಸಂದರ್ಭದಲ್ಲೂ ‘ವಾಸ್ತು’ ಬಿಡದ ಸಚಿವ ಹೆಚ್.ಡಿ ರೇವಣ್ಣ…. ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಶಿರಾಡಿ ಘಾಟ್ ರಸ್ತೆ ಉದ್ಘಾಟನೆ ವೇಳೆ ಟೇಪ್ ಕತ್ತರಿಸಲು ಸಚಿವ ಹೆಚ್.ಡಿ ರೇವಣ್ಣ ದಿಕ್ಕು ಬದಲಿಸಿದರು. ಪಶ್ಚಿಮಾಭಿಮುಖವಾಗಿ ನಿಂತು ಟೇಪ್‌ಕಟ್ ಮಾಡಬೇಕಿತ್ತು. ಇದಕ್ಕಾಗಿ ‌ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿ ಕೊಂಡಿದ್ದರು. ಪೂಜೆ ಸಲ್ಲಿಸಿದ ಕೂಡಲೇ ಪೂರ್ವ ದಿಕ್ಕಿಗೆ ನಿಂತು ರಸ್ತೆ ಉದ್ಘಾಟನೆ ಮಾಡಿದರು.


ಜತೆಗ ಮಾಧ್ಯಮದವರ ದಿಕ್ಕನ್ನು ಬದಲು ಮಾಡಿದರು ಸಚಿವರ ನಡೆ ನೋಡಿ ಸ್ಥಳದಲ್ಲಿ‌ ಸಚಿವ ಖಾದರ್,ಸಂಸದ ನಳೀನ್ ಕುಮಾರ್ ಕಟೀಲ್ ಹಾಗೂ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ಸಕಲೇಶಪುರದ ಕೆಂಪುಹೊಳೆ ಜಂಕ್ಷನ್‌ ನಲ್ಲಿ ಶಿರಾಡಿ ಘಾಟ್ ರಸ್ತೆ ಉದ್ಘಾಟನೆ ಮಾಡಲಾಯಿತು. ಆರು ತಿಂಗಳ ಬಳಿಕ ಸಂಚಾರಕ್ಕೆ ಶಿರಾಡಿಘಾಟ್ ರಸ್ತೆ ಮುಕ್ತ ಮಾಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com