Bollywood masala : ಸ್ನಾನ ಮಾಡೊಕೆ ಟೆರೇಸ್ ಬೇಕು ಈ ನಟಿಗೆ….

ಶಾಕಿಂಗ್: ಟೆರೇಸ್ ಮೇಲೆ ಸ್ನಾನ ಮಾಡ್ತಾಳೆ ಈ ನಟಿ…! ಜನರಲ್ಲಿ ಒಳ್ಳೆಯ ಹಾಗೂ ಕೆಟ್ಟ ಹವ್ಯಾಸಗಳಿರುತ್ತವೆ. ಸೆಲೆಬ್ರಿಟಿಗಳು ಕೂಡ ಇದರಿಂದ ಹೊರತಾಗಿಲ್ಲ. ಬಾಲಿವುಡ್ ನ ಕೆಲ ಸ್ಟಾರ್ ಗಳಿಗೂ ಚಿತ್ರ ವಿಚಿತ್ರ ಹವ್ಯಾಸಗಳಿವೆ.

ಬಾಲಿವುಡ್ ನಟಿ ಸುಶ್ಮಿತಾ ಸೇನ್ ಗೆ ಬಾತ್ ರೂಂ ಒಳಗೆ ಸ್ನಾನ ಮಾಡುವುದು ಇಷ್ಟವಾಗುವುದಿಲ್ಲವಂತೆ. ಮುಕ್ತ ಪ್ರದೇಶದಲ್ಲಿ ಆಕೆಗೆ ಸ್ನಾನ ಮಾಡುವುದು ಬಲು ಪ್ರೀತಿಯಂತೆ. ಹಾಗಾಗಿ ಟೆರೆಸ್ ಮೇಲೆ ಬಾತ್ ಟಬ್ ಇಟ್ಟುಕೊಂಡಿದ್ದಾಳೆ ಸುಶ್ಮಿತಾ. ಆಕಾಶ ನೋಡ್ತಾ ಸ್ನಾನ ಮಾಡುವ ಮಜವೇ ಬೇರೆ ಎನ್ನುತ್ತಾಳೆ ಸುಂದರಿ. ಹಾಗೆ ಆಕೆಗೆ ಹಾವುಗಳೆಂದ್ರೂ ಪಂಚಪ್ರಾಣ. ಮನೆಯಲ್ಲಿ ಹೆಬ್ಬಾವು ಸಾಕಿದ್ದಾಳೆ ಬೆಡಗಿ.

ಹೊಟ್ಟೆಯನ್ನು ಸ್ವಚ್ಛಗೊಳಿಸುವ ಹಣ್ಣುಗಳಲ್ಲಿ ಪಪ್ಪಾಯ ಕೂಡ ಒಂದು. ಅನೇಕರು ಈ ಹಣ್ಣನ್ನು ಇಷ್ಟಪಡ್ತಾರೆ. ಆದ್ರೆ ಹಿರಿಯ ನಟ ಜಿತೇಂದ್ರ ಈ ಹಣ್ಣನ್ನು ತಿನ್ನುವ ವಿಧಾನವೇ ಬೇರೆ. ಟಾಯ್ಲೆಟ್ ಗೆ ಹೋದಾಗೆಲ್ಲ ಪಪ್ಪಾಯ ತಿನ್ನುತ್ತಾರೆ ಜಿತೇಂದ್ರ. ಅವರು ಟಾಯ್ಲೆಟ್ ಗೆ ಹೋಗುವಾಗ ಕೈನಲ್ಲಿ ಪಪ್ಪಾಯ ಇದ್ದೇ ಇರುತ್ತೆ.

ಸದಾ ಉಗುರು ಕಚ್ಚುತ್ತಿರುತ್ತಾಳಂತೆ ಬಾಲಿವುಡ್ ಬೇಬೋ. ಈ ಚಟದಿಂದ ಹೊರಗೆ ಬರಲು ಸಾಕಷ್ಟು ಪ್ರಯತ್ನಪಟ್ಟಿದ್ದಾಳೆ ಕರೀನಾ. ಆದ್ರೆ ಅದು ಸಾಧ್ಯವಾಗಲಿಲ್ಲವಂತೆ.

Leave a Reply

Your email address will not be published.