Technology : Airtel ವಿಮಾನಯಾನದ ಗ್ರಾಹಕರಿಗೆ ನೀಡ್ತಿದೆ ಭರ್ಜರಿ ಗಿಫ್ಟ್ …

ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡ್ತಿದೆ ಏರ್ಟೆಲ್ , ಹೌದು  ವಿಮಾನದೊಳಗೂ ಇನ್ಮುಂದೆ ಗ್ರಾಹಕರಿಗೆ ಇಂಟರ್ನೆಟ್ ಸೌಲಭ್ಯ ಸಿಗಲಿದೆ. ಕಂಪನಿ ಅಂತರಾಷ್ಟ್ರೀಯ ಹಾಗೂ ದೇಶಿಯ ವಿಮಾನದಲ್ಲಿ ಅತಿ ವೇಗದ ಇಂಟರ್ನೆಟ್ ಡೇಟಾ ನೀಡಲಿದೆ. ಇದಕ್ಕಾಗಿ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಶೀಘ್ರವೇ ಹೊಸ ಸೌಲಭ್ಯ ನೀಡುವ ತಯಾರಿ ನಡೆಸಿದೆ.

ಇತ್ತೀಚಿಗಷ್ಟೇ ಏರ್ಟೆಲ್ ಜಾಗತಿಕ ಸಮೂಹ ಸಿಮ್ಲೆಸ್ ಅಲಾಯನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಯಾವುದೇ ಅಡೆತಡೆಯಿಲ್ಲದೆ ಏರ್ಟೆಲ್ ಬಳಕೆದಾರರಿಗೆ ಇಂಟರ್ನೆಟ್ ಸೇವೆ ನೀಡುವುದಾಗಿ ಹೇಳಿದೆ. ಸಿಮ್ಲೆಸ್ ಅಲಾಯನ್ಸ್ ಸಮೂಹದಲ್ಲಿ ಒನ್ವೆಬ್, ಏರ್ಬಸ್, ಡೆಲ್ಟಾ ಮತ್ತು ಸ್ಪ್ರಿಂಟ್ ಸೇರಿದಂತೆ ಅನೇಕ ಕಂಪನಿಗಳಿವೆ.

ಗ್ರಾಹಕರಿಗೆ ವೇಗದ ಇಂಟರ್ನೆಟ್ ನೀಡಲು ಉಪಗ್ರಹ ತಂತ್ರಜ್ಞಾನವನ್ನು ಬಳಸಲಿದೆ. ಸಿಮ್ಲೆಸ್ ಅಲಾಯನ್ಸ್ ಜೊತೆ ಒಪ್ಪಂದದ ನಂತ್ರ ಮೊಬೈಲ್ ಆಪರೇಟರ್ಸ್ ಹಾಗೂ ಏರ್ಲೈನ್ಸ್ ಮಧ್ಯೆ ಹೊಸ ಸಂಬಂಧ ಶುರುವಾಗಲಿದೆ ಎಂದು ಏರ್ಟೆಲ್ ಹೇಳಿದೆ.

ಏರ್ಟೆಲ್ ದೇಶದ ಅತಿ ದೊಡ್ಡ ಹಾಗೂ ವಿಶ್ವದ ಮೂರನೇ ಅತಿ ದೊಡ್ಡ ಮೊಬೈಲ್ ಕಂಪನಿಯಾಗಿದೆ. ದಕ್ಷಿಣ ಏಷ್ಯಾ ಹಾಗೂ ಆಫ್ರಿಕಾದಲ್ಲಿ ಹೆಚ್ಚಿನ ಗ್ರಾಹಕರಿದ್ದು, ಏರ್ಟೆಲ್ ಈ ಹೊಸ ಸೌಲಭ್ಯದ ಲಾಭವನ್ನು 37 ಲಕ್ಷಕ್ಕೂ ಹೆಚ್ಚು ಬಳಕೆದಾರರು ಪಡೆಯಲಿದ್ದಾರೆ.

One thought on “Technology : Airtel ವಿಮಾನಯಾನದ ಗ್ರಾಹಕರಿಗೆ ನೀಡ್ತಿದೆ ಭರ್ಜರಿ ಗಿಫ್ಟ್ …

Leave a Reply

Your email address will not be published.

Social Media Auto Publish Powered By : XYZScripts.com