ಮುಸ್ಲಿಂ ಪುರುಷರ ಪರ ಕಾಂಗ್ರೆಸ್ – ಮಹಿಳೆಯರ ಪರ ಅವರಿಲ್ಲ – PM ಮೋದಿ ವಾಗ್ದಾಳಿ..

ತ್ರಿವಳಿ ತಲಾಖ್ ನಿಷೇಧದ ವಿಷಯವನ್ನಿಟ್ಟುಕೊಂಡು PM ನರೇಂದ್ರ ಮೋದಿ ಕಾಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಎಲ್ಲ ವೇದಿಕೆಗಳನ್ನು ಬಳಿಸಿಕೊಳ್ಳುತ್ತಿರುವ ಮೋದಿ  ಮುಸಲ್ಮಾನರ ಮಹಿಳೆಯರಿಗೆ ನ್ಯಾಯ ಒದಗಿಸುವ ಪರವಾಗಿ ಕಾಂಗ್ರೆಸ್ ಮತ್ತ ಇತರ ಪಕ್ಷಗಳು ಇಲ್ಲ, ಅವು ಕೇವಲ ಅವರನ್ನು ಮತ ಬ್ಯಾಂಕ್ ಮಾಡಿಕೊಂದ್ದಾರೆ ಎಂದು ಕಟುಕಿದರು.

ದೆಹಲಿಯ ಮುಸಲ್ಮಾನರೊಂದಿಗೆ ನಡೆದ ಸಭೆಯಲ್ಲಿ ಕಾಂಗ್ರೆಸ್ ಅದ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂದು ಹೇಳಿರುವ ಮಾಧ್ಯಮ ವರದಿಯೊಂದನ್ನು ಪ್ರದರ್ಶಿಸಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರವರು ಕಾಂಗ್ರೆಸ್ ಮುಸ್ಲಿಮರ ಪಕ್ಷವೇ ಎಂಬುದನ್ನು ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದು, ಅದರ ಬೆನ್ನ ಹಿಂದೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಸಹ ಕಾಂಗ್ರೆಸ್ ಪಕ್ಷವನ್ನು ‌ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಅಜಮ್’ಘಡದಲ್ಲಿ ಸುಮಾರು ಮುನ್ನೂರ ನಲವತ್ತು ಕಿಲೋಮೀಟರುಗಳ ಪೂರ್ವಾಂಚಲ ಎಕ್ಸ್‌ಪ್ರೆಸ್‌ ಹೆದ್ದಾರಿಯ ಯೋಜನೆಗೆ ಚಾಲನೆ ನೀಡಿದ ಸಮಾವೇಶದಲ್ಲಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಪಕ್ಷಗಳ ವಿರುದ್ದ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಪಕ್ಷವು ಕೇವಲ ಮುಸ್ಲಿಂ ಪುರುಷರ ಪರ ಮಾತ್ರವಾಗಿ ಇದೆಯೋ ಅಥವಾ ಮುಸಲ್ಮಾನ ಮಹಿಳೆಯರ ‌ಪರವಾಗಿಯೂ ಇದೆಯೇ? ಎಂದು ಟೀಕಿಸಿದ್ದಾರೆ.

ತ್ರಿವಳಿ ತಲಾಖ್ ವಿರುದ್ಧದ ಕಾಯ್ದೆಗಳನ್ನು ಜಾರಿಮಾಡಲು ಬಿಡದ ವಿಪಕ್ಷಗಳು ಸಂಸತ್ ಕಲಾಪವನ್ನು ಹಾಳು ಮಾಡುತ್ತಿವೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತ್ರಿವಳಿ ತಲಾಖ್ ಬಗ್ಗೆ ವಿರೋಧ ಪಕ್ಷಗಳ ನಿಲುವು ಬಯಲಾಗಿದ್ದು, ಕೇಂದ್ರ ಸರ್ಕಾರ ಒಂದು ಕಡೆ ಮಹಿಳೆಯರ ಬದುಕನ್ನು ಸುಗಮವಾಗಿಸಲು ಪ್ರಯತ್ನಿಸುತಿದ್ದರೆ, ಇನ್ನೊಂದು ಕಡೆ ವಿರೋಧ ಪಕ್ಷಗಳು ಮಹಿಳೆಯರ ಬದುಕನ್ನು ‌ದುಸ್ತರ ಮಾಡಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಅಸಮಾಧಾನ ‌ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.