ಮಾರ್ಕ್ಸ್ ಕಾರ್ಡ್ಗು ಬಂತು ಆಧಾರ್ ಕಾರ್ಡ್ ಮಾದರಿ – ಈ ವರ್ಷದಿಂದ ನೀಡಲಿದೆ ಬೆಂಗಳೂರು ವಿವಿ

ನಕಲಿ ಅಂಕಪಟ್ಟಿಯಿಂದ ಯಾವಾಗಲು ಸುದ್ದಿಯಲ್ಲಿರವ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಒಂದು ವಿಶೇಷ ಸುದ್ದಿ.  ಪ್ರಸಕ್ತ ಸಾಲಿನಿಂದ ಆಧಾರ್‌ಕಾರ್ಡ್‌ ಮಾದರಿಯಲ್ಲಿ ಅಂಕಪಟ್ಟಿಯನ್ನು ಪಡೆದುಕೊಳ್ಳಬಹುದು. ಹೌದು. ಈ ವರ್ಷದಿಂದ ಬೆಂಗಳೂರು ವಿವಿ ವಿದ್ಯಾರ್ಥಿಗಳು ‘ನ್ಯಾಷನಲ್‌ ಅಕಾಡೆಮಿ ಡೆಪಾಸಿಟರಿ’ (ಎನ್‌ಎಡಿ)ಯಿಂದ ಅಂಕಪಟ್ಟಿಗಳನ್ನು ಆಧಾರ್ ಕಾರ್ಡ್ ಮಾದರಿಯಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.


ಈ ಕುರಿತು ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್‌. ವೇಣುಗೋಪಾಲ್‌ ಮಾಹಿತಿ ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ವಿವಿಯು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನೂ ಆನ್‌ಲೈನ್‌ ಮೂಲಕವೇ ನಡೆಸಲಿದೆ ಎಂದು ಹೇಳಿದ್ದಾರೆ.

ಜ್ಞಾನಭಾರತಿ ಕ್ಯಾಂಪಸ್‌ನಲ್ಲಿನ ಪರೀಕ್ಷಾ ಭವನವನ್ನು ಒಂದು ವರ್ಷದೊಳಗೆ ಉನ್ನತೀಕರಿಸುವ ಮೂಲಕ ನಿಗದಿತ ಸಮಯದೊಳಗೆ ಫಲಿತಾಂಶ ಪ್ರಕಟಿಸಲು ಕ್ರಮ ವಹಿಸುತ್ತೇವೆ. ಅಲ್ಲದೆ, ವಿದ್ಯಾರ್ಥಿಗಳು ಹಾಗೂ ಉದ್ಯೋಗ ನೀಡುವ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಪದವಿ ಪ್ರಮಾಣ ಪತ್ರಗಳನ್ನು ಯುಜಿಸಿ ಕಾರ್ಯಕ್ರಮವಾದ ನ್ಯಾಷನಲ್‌ ಅಕಾಡೆಮಿಕ್‌ ಡೆಪಾಸಿಟರಿ(ಎನ್‌ಎಡಿ)ಯಲ್ಲಿ ಅಳವಡಿಸುತ್ತೇವೆ. ಈಗಾಗಲೇ ಎಂಎಸ್‌ಐಎಲ್‌ನಿಂದ ಖರೀದಿಸಿರುವ ಖಾಲಿ ಅಂಕಪಟ್ಟಿಗಳನ್ನು ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿತರಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
019-2020ನೇ ಸಾಲಿನಿಂದ ಬೆಂಗಳೂರು ವಿವಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳು ಎರಡು ವಿಷಯಗಳಲ್ಲಿ ಕಡ್ಡಾಯವಾಗಿ ಮ್ಯಾಸೀವ್‌ ಓಪನ್‌ ಆನ್‌ಲೈನ್‌ ಕೋರ್ಸ್‌(ಎಂಓಓಸಿಎಸ್‌) ಪೂರೈಸಬೇಕು. ಈ ಕೋರ್ಸ್‌ ಪೂರೈಸುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರಮಾಣ ಪತ್ರ ನೀಡಲಾಗುತ್ತದೆ. ಅದರ ಆಧಾರದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತದೆ ಎಂದು ಕೂಡ ಇದೇ ವೇಳೆ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com