Blooywood star ಆಲಿಯಾ ಭಟ್ ಮಂಡ್ಯದ ಹಳ್ಳಿಗೆ ಬೆಳಕಾದ ಕಥೆ ಇಲ್ಲಿದೆ….

ರಾಝಿ ಚಿತ್ರದ ಮನೋಙ್ಙ ಅಭಿನಯದ ಮೂಲಕ ಗಮನಸೆಳಿದಿದ್ದ ಖ್ಯಾತ ನೀರ್ದೇಶಕ ಮಹೇಶ್ ಭಟ್ ಪುತ್ರಿ ಅಲಿಯಾ ಭಟ್ ಈಗ ಮತ್ತೆ  ಸುದ್ದಿಯಲ್ಲಿದ್ದಾರೆ. ನಾವು ಹೇಳ ಹೊರಟಿರುವುದು  ಆಲಿಯಾ ಮತ್ತು ರಣಬೀರ್ ಕಪೂರ ನಡುವಿನ ಪ್ರೇಮ ಸಲ್ಲಾಪವನಲ್ಲ, ಹೈ ವೇ ನಟಿ ಅಲಿಯಾ ಭಟ್ ರ ಸಾಮಾಜಿಕ ಕಾರ್ಯವನ್ನು….

ಜನಪ್ರಿಯ ನಟಿ ಅಲಿಯಾ ಭಟ್ ಅವರು ಕರ್ನಾಟಕದ ಮಂಡ್ಯ ಜಿಲ್ಲೆಯ ಒಂದು ಪುಟ್ಟ ಹಳ್ಳಿಯೊಂದಕ್ಕೆ ಬೆಳಕಾಗುವ ಮೂಲಕ ಸದ್ದಿಲ್ಲದೆ ಸಾಮಾಜಿಕ ಸೇವೆಯನ್ನು ಮಾಡಿದ್ದಾರೆ. ತಮ್ಮ ಉಡುಪನ್ನು ಹರಾಜು ಹಾಕುವ ಮೂಲಕ ಸಂಗ್ರಹಿಸಿದ ಹಣದಲ್ಲಿ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ಕಗ್ಗತ್ತಲಿನಲ್ಲಿದ್ದ ಸುಮಾರು ನಲವತ್ತು ಗುಡಿಸಲು ನಿವಾಸಿಗಳಿಗೆ ಸೋಲಾರ್ ದೀಪದ ಬೆಳಕು ನೀಡಿದ್ದಾರೆ. ಈ  ಮೂಲಕ ದೇಶದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಆದ ಖದರ್ರನ್ನು ಹೊಂದಿರುವ ಜನಪ್ರಿಯ ನಟಿ ಆಲಿಯಾ ಭಟ್ ಅವರು ಇದೇ ವರ್ಷದಿಂದ ಆರಂಭವಾದ “ಮೀ ವಾರ್ಡ್ರೋಬ್ ಈಸ್ ಸೂ ವಾರ್ಡ್ರೋಬ್” ಎಂಬ ಅಭಿಯಾನದ ಅಂಗವಾಗಿ ತಾವು ಚಲನಚಿತ್ರದ ಶೂಟಿಂಗ್ ಸಂದರ್ಭ ಇನ್ನಿತರ ವಿಶೇಷ ಸಂದರ್ಭ ಹಾಕಿಕೊಂಡಿದ್ದ ಉಡುಪುಗಳನ್ನು ಹರಾಜು ಹಾಕಿ ಆ ಮೂಲಕ ಬಂದ ಹಣವನ್ನು ಸಾಮಾಜಿಕ ಸೇವೆಗೆ ತೊಡಗಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಈ ಬಾರಿ ಹರಾಜು ಮೂಲಕ ಬಂದ ಹಣದಿಂದ ಮಂಡ್ಯದ ಕಿಕ್ಕೇರಿ ಎಂಬ ಹಳ್ಳಿಯ ಗುಡಿಸಲುಗಳಿಗೆ ಸೋಲಾರ್ ದೀಪದ ಭಾಗ್ಯ ದೊರಕಿದೆ.

ಆಲಿಯಾ ಭಟ್ ಅವರು ಬೆಂಗಳೂರು ಮೂಲದ ಎಆರ್ ಓ ಎಚ್ ಎ ಎಂಬ ಎನ್ಜಿಒ ಜೊತೆಗೂಡಿ ಈ ಸಮಾಜ ಸೇವೆಯನ್ನು ನಡೆಸುತ್ತಿದ್ದು ಈ ಎನ್ಜಿಒ ಪ್ಲಾಸ್ಟಿಕ್ ಬಾಟಲ್ಗಳನ್ನು ಮರುಬಳಕೆ ಮಾಡಿ ಅದರಿಂದ ಬಂದ ಹಣದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸೋಲಾರ್ ದೀಪದ ವ್ಯವಸ್ಥೆ ಮಾಡುತ್ತಿದೆ.

ಈ ಬಗ್ಗೆ ಟ್ವಿಟ್ಟರ್ ಮೂಲಕ ಸಂತಸ ವ್ಯಕ್ತಪಡಿಸಿರುವ ಬಾಲಿವುಡ್ ನಟಿ ಆಲಿಯಾ ಭಟ್ ಅವರು ನಮ್ಮ ಅಭಿಯಾನ ಕಿಕ್ಕೇರಿಯಲ್ಲಿ ನಲವತ್ತು ಕುಟುಂಬಗಳಿಗೆ ಬೆಳಕು ನೀಡಿದೆ. ನಮ್ಮ ದೇಶದಲ್ಲಿ ಇಂದಿಗೂ ಎಷ್ಟೋ ಜನ ಕತ್ತಲಲ್ಲಿ ವಾಸಿಸುತ್ತಿದ್ದಾರೆ, ಪರಿಸರ ಸ್ನೇಹಿ ವಿಧಾನದ ಮೂಲಕ ಇವರೆಲ್ಲರಿಗೂ ಬೆಳಕು ನೀಡುವುದು ನಮ್ಮ ಗುರಿಯಾಗಿದೆ ಬೆಂಗಳೂರು ಮೂಲದ ಸಂಸ್ಥೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದೆ. ಇದೇ ರೀತಿಯಲ್ಲಿ ಮತ್ತಷ್ಟು ಸಂಸ್ಥೆಗಳ ಜೊತೆಗೂಡಿ ಸೇವೆ ಸಲ್ಲಿಸುತ್ತೇನೆ ಎಂದು ಆಲಿಯಾ ಭಟ್ ಟ್ವೀಟ್ ಮಾಡಿದ್ದಾರೆ.


ಆಲಿಯಾ ಭಟ್ ಅವರು ಮಾಡಿರುವ ಈ ಸಮಾಜ ಸೇವೆ ಬಗ್ಗೆ  ವ್ಯಾಪಕ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ. ಇದರೊಂದಿಗೆ ದೇಶದಲ್ಲಿ 100 ಕ್ಕೆ 100 ರಷ್ಟು ಮನೆಗಳಿಗೆ ವಿದ್ಯುತ್ ದೀಪದ ಭಾಗ್ಯ ಕರುಣಿಸಿದ್ದೆವೆ ಎಂದು ಜಾಹುರಾತು ನೀಡಿ ಪ್ರಚಾರ ಪಡೆಯುತ್ತಿದ್ದ PM ನರೇಂದ್ರ ಮೋದಿ ಮತ್ತು BJP ಗೆ ಬಾರಿ ಮುಜಗರವಾಗದೆ. ನಮ್ಮ ದೇಶದಲ್ಲಿ ಇಂದಿಗೂ ಎಷ್ಟೋ ಜನ ಕತ್ತಲಲ್ಲಿ ವಾಸಿಸುತ್ತಿದ್ದಾರೆ, ಕೇವಲ ಸುಳ್ಳು ಅಂಕಿ ಸಂಖ್ಯೆಗಳನ್ನು ನೀಡಿ ಜನರನ್ನು ಮರಳು ಮಾಡುವುದನ್ನು PM ನರೇಂದ್ರ ಮೋದಿ ಇನ್ನಾದರು ಬಿಡಬೇಕು ಎಂದು ಟ್ವಿಟಿಗರು ಆಗ್ರಹಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com