ರೈತರ ಸಾಲಮನ್ನಾ : ಮಾತಿಗೆ ತಪ್ಪಿದ ಸರಕಾರ – ಧರಣಿಗೆ ರೈತ ಮುಖಂಡರು ನಿರ್ಧಾರ …

ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಮಾತಿಗೆ ತಪ್ಪಿದ್ದಾರೆ ಎಂದು ಆರೋಪಿಸಿರುವ ರೈತ ಮುಖಂಡರು, ಎಲ್ಲಾ ಜೆಡಿಎಸ್ ಶಾಸಕರ ಮನೆ ಮುಂದೆ ಧರಣಿ ಹಾಗೂ ಒಂದು ದಿನ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಿದ್ದಾರೆ.


ಸಾಲಮನ್ನಾ ವಿಚಾರದಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಧೋರಣೆಯನ್ನ ಕರ್ನಾಟಕ ರಾಜ್ಯ ರೈತ ಸಂಘ,ಹಸಿರು ಸೇನೆ ಖಂಡಿಸಿದೆ. ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಹೋಸಕೋಟೆ ಬಸವರಾಜು ನೇತೃತ್ವದಲ್ಲಿ ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸಲು ಚರ್ಚೆ ನಡೆಸಲಾಯಿತು.

ಸಾಲ ಮನ್ನಾ ವಿಚಾರದಲ್ಲಿ ಸರ್ಕಾರದ ಧೋರಣೆ ಖಂಡಿಸಿ 39 ನೇ ರೈತ ಹುತಾತ್ಮರ ದಿನಾಚರಣೆ ಜುಲೈ 21 ರಂದು ಹೊಸಪೇಟೆ ಹಿಟ್ನಾಳ್ ಬಳಿ ಒಂದು ದಿನ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೆ ಎಲ್ಲಾ ಜೆಡಿಎಸ್ ಶಾಸಕರ ಮನೆ ಮುಂದೆ ಧರಣಿ ಮಾಡಲು ತೀರ್ಮಾನಿಸಿದ್ದಾರೆ.

ಕುಮಾರಸ್ವಾಮಿ ಸಂಪೂರ್ಣ ರೈತರ ಸಾಲಮನ್ನಾ ಮಾಡುವ ವಿಚಾರದಲ್ಲಿ ಮಾತಿಗೆ ತಪ್ಪಿದ್ದಾರೆ. ಬೆಳೆ ಸಾಲದ ಜೊತೆಗೆ, 2 ಬೇಸಾಯಕ್ಕಾಗಿ ಮಾಡಿದ ಸಾಲ ಮನ್ನಾ ಮಾಡಬೇಕು. ಗರ್ಭಿಣಿ ಮಹಿಳೆಯರಿಗೆ 6 ಸಾವಿರ ಮಾಶಾಸನ ನೀಡುವುದಾಗಿ ಹೇಳಿದ್ರು ಅದೂ ಆಗಿಲ್ಲ. ಗ್ರಾಮೀಣ ಭಾಗದ ನಿರುದ್ಯೋಗ ನಿವಾರಣೆಗೆ ಕೇಂದ್ರ, ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು. ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ನಡೆದುಕೊಳ್ಳಲಿ ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ನಾವು ಎಂದಿಗೂ ಸಾಲಮನ್ನಾ ಮಾಡಿ ಎಂದು ಕೇಳಿಲ್ಲ‌‌. ಆದರೇ ಇತ್ತಿಚೀನ ದಿನಗಳಲ್ಲಿ ನಾವು ಸಾಲ ಮನ್ನಾಮಾಡಿ ಎಂದು ಕೇಳಿದ್ದೇವೆ. ಕಾರಣ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡದೆ ಅವರಿಗೆ ನೀವು ಮೋಸ ಮಾಡಿದ್ದೀರಾ. ಸರಿಯಾಗಿ ನೋಡುವುದಾದರೆ ನಿಜವಾದ ಸುಸ್ತಿದಾರು ಸರ್ಕಾರಗಳೆ ಎಂದು ಕಿಡಿಕಾರಿದರು.

ಜೆಡಿಎಸ್ ಪಕ್ಷ ಪ್ರನಾಳಿಕೆಯಲ್ಲಿ ನೀಡಿದ ಆಸ್ವಾಸನೆಯನ್ನು ನೀಡ ಬೇಕು. ಕೇಂದ್ರ ಸರ್ಕಾರವು ರಾಜ್ಯದ ರೈತರ ಸಾಲ ಮನ್ನ ಮಾಡಲು ಮುಂದಾಗಬೇಕು. ಪುಟ್ಟಣ್ಣಯ್ಯ ಅವರು ಮಂಡಿಸಿದ ಮಸೂದೆ ಇನ್ನು ಬಾಕಿದೆ. ಕರ್ನಾಟಕ ರೈತರ ಆತ್ಮಹತ್ಯೆಯ ಪ್ರಕರಣಗಳಲ್ಲಿ ೨ ನೇ ಸ್ಥಾನದಲ್ಲಿದೆ. ನಮಗೆ ವೈಜ್ಞಾನಿಕ ಬೆಲೆ ಬೇಕು. ಸಾಲ ಮನ್ನ ಬೇಡ. ಇದುವರೆಗೆ ಸರ್ಕಾರಗಳು ಮಾಡಿರುವ ಮೊಸಕ್ಕಾಗಿ ಸಾಲ ಮನ್ನ ಮಾಡಿ ಅಷ್ಟೆ ಎಂದು ಆಗ್ರಹಿಸಿದರು.

ನಮಗೆ ವೈಜ್ಞಾನಿಕ ಬೆಲೆ ನೀಡಿದರೆ ನಾವು ಅಭಿವೃದ್ಧಿ ಹೊಂದುತ್ತೇವೆ. ನಾವು ಸತತ 16 ವರ್ಷ ಬರಗಾಲವನ್ನು ಅನುಭವಿಸಿದ್ದೇವೆ.‌ ನಾವು ಅಭಿವೃದ್ಧಿ ಹೊಂದಬೇಕಾದರೆ ವೈಜ್ಞಾನಿಕ ಬೆಲೆ ಮತ್ತು ಪ್ಯಾಕೇಜ್ ನೀಡಬೇಕು ಸಾಲ ಮನ್ನ ಬೇಡ ಎಂದರು.

2 thoughts on “ರೈತರ ಸಾಲಮನ್ನಾ : ಮಾತಿಗೆ ತಪ್ಪಿದ ಸರಕಾರ – ಧರಣಿಗೆ ರೈತ ಮುಖಂಡರು ನಿರ್ಧಾರ …

Leave a Reply

Your email address will not be published.