ಪದಕ ಗೆದ್ದು ದೇಶದ ಹೆಮ್ಮೆಯ ಪುತ್ರಿಯ ಜಾತಿ ಹುಡುಕಾಟಡಲ್ಲಿ ತಲ್ಲಿನರು – ಇದು ನಮ್ಮ ಭಾರತ..

ಪಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಜೂನಿಯರ್ ಸ್ಪರ್ಧೆಯಲ್ಲಿ ಭಾರತದ ಹಿಮಾ ದಾಸ್ ಚಿನ್ನದ ಪದಕ ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಆದರೆ ಅದರ ಸಂಭ್ರಮವನ್ನಾಚರಿಸಬೇಕಿದ್ದ ಜನ ಅವಳ ಜಾತಿ ಹುಡುಕಾಟದಲ್ಲಿ ನಿರತರಾಗಿದ್ದಾರೆ..

ಹೌದು ಹಿಮಾ ದಾಸ್ ಅವರ ಸಾಧನೆಗೆ ದೇಶದ ಜನ ಅಭಿನಂದಿಸುತ್ತಿರುವ ಸಂದರ್ಭದಲ್ಲೇ ಕೆಲವರ ನಡವಳಿಕೆ ಎಲ್ಲರನ್ನೂ ತಲೆ ತಗ್ಗಿಸುವಂತೆ ಮಾಡಿದೆ. ಹಿಮಾ ದಾಸ್, ಚಿನ್ನದ ಪದಕ ಗೆಲ್ಲುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಗೂಗಲ್ ನಲ್ಲಿ ಕೆಲವರು ಹಿಮಾ ದಾಸ್ ಯಾವ ಜಾತಿಗೆ ಸೇರಿದ್ದಾರೆಂಬುದನ್ನು ಹುಡುಕಿದ್ದಾರೆ. ಅಹು ಗೂಗಲ್ ಟಾಪ್ ನಲ್ಲಿ ಕೂಡಾ ಬಂದಿದೆ…ಇದು ನಾಚಿಕೇಯ ವಿಷಯ..


ಜಾತ್ಯಾತೀತ ರಾಷ್ಟ್ರ ಭಾರತದಲ್ಲಿ ಜಾತೀಯತೆ ಇನ್ನೂ ಯಾವ ಮಟ್ಟದಲ್ಲಿ ತಾಂಡವವಾಡುತ್ತಿದೆ ಎಂಬುದನ್ನು ಇದು ತೋರಿಸುತ್ತಿದ್ದು, 2016 ರ ರಿಯೋ ಒಲಂಪಿಕ್ಸ್ ನಲ್ಲಿ ಪಿ.ವಿ. ಸಿಂಧು ಹಾಗೂ ಸಾಕ್ಷಿ ಮಲ್ಲಿಕ್ ಪದಕ ಗೆದ್ದ ಸಂದರ್ಭದಲ್ಲಿಯೂ ಅವರುಗಳ ಜಾತಿಯನ್ನು ಗೂಗಲ್ ನಲ್ಲಿ ಕೆಲವರು ಹುಡುಕಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

One thought on “ಪದಕ ಗೆದ್ದು ದೇಶದ ಹೆಮ್ಮೆಯ ಪುತ್ರಿಯ ಜಾತಿ ಹುಡುಕಾಟಡಲ್ಲಿ ತಲ್ಲಿನರು – ಇದು ನಮ್ಮ ಭಾರತ..

Leave a Reply

Your email address will not be published.

Social Media Auto Publish Powered By : XYZScripts.com