World Champion Hima das : ಅಸ್ಸಾಂನ ಗದ್ದೆಯಿಂದ ವಿಶ್ವ ಚಾಂಪಿಯನ್ – ಹಿಮಾ ದಾಸ ..

ಮನುಷ್ಯ ಮನಸ್ಸು ಮಾಡಿದರೆ ಯಾವುದು ಕಷ್ಟ- ಸಾಧ್ಯವಲ್ಲ. ಏನಾದರೂ ಸಾಧನೆ ಮಾಡುತ್ತೇನೆಂಬ ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮ ಇರಬೇಕು ಅಷ್ಟೇ. ಇದನ್ನೆ ನಂಬಿ ಹೊರಟ ಹಿಮಾ ದಾಸ್ ಎಂಬ ಬಡ ರೈತನ ಮಗಳ ಯಶಸ್ಸಿನ ಕಥೆ ಇದು..   ಅಸ್ಸಾಂನ ನಾಗೋನ್ ಜಿಲ್ಲೆಯ ಒಂದು ಪುಟ್ಟ ಹಳ್ಳಿಯ ಬಡ ರೈತನ 6ನೇ ಮಗಳು ಹಿಮಾ, ತನ್ನ ಚಿಕ್ಕ ವಯಸ್ಸಿನಲ್ಲಿ ತನ್ನ ತಂದೆಯ ಗದ್ದೆಯಲ್ಲಿ ಹುಡುಗರ ಜೊತೆ ಪುಟ್ ಬಾಲ್ ಆಟವಾಡುತ್ತ ಬತ್ತದ ಗದ್ದೆಯನ್ನು ಹದಮಾಡಲು ತಂದೆಗೆ ನೆರವಾಗಿತ್ತಿದ್ದ  ಹಿಮಾ, ವಿಶ್ವ ಚಾಂಪಿಯನ್ ಆಗಿದ್ದು ಒಂದು ಸಾಹಸ ಗಾಥೆ..

ಬಾಲ್ಯದಲ್ಲಿ ಪುಟ್ ಬಾಲ್ ಆಟವಾಡುತ್ತಿ ಹಿಮಾಳನ್ನು ಗಮನಿಸುತ್ತಿದ್ದ ಸ್ಥಳಿಯರೊಬ್ಬರು ಆಕೆಯ ತಂದೆಗೆ ಅಥ್ಲೇಟಿಕ್ಸ್’ಗೆ ಸೇರಿಸಲು ಸಲಹೆ ನೀಡುತ್ತಾರೆ. ಅಲ್ಲಿಂದ ಶುರುವಾದ ಹಿಮಾಳ ಟ್ರ್ಯಾಕ್ ಬದುಕಿಗೆ ತಿರುವು ಕೊಟ್ಟಿದ್ದು 8 ವರ್ಷದ ಹಿಮಾ ಸರಿಯಾಗಿ 18 ತಿಂಗಳ ಹಿಂದೆ ಅಸ್ಸಾಂನ ಶಿವಸಾಗರದಲ್ಲಿ ನಡೆದ ಅಂತರ-ಜಿಲ್ಲಾ ಕ್ರೀಡಾಕೂಟ. ಇಲ್ಲಿ ಭಾಗವಹಿಸಿದ್ದರು ಹಿಮಾ ಅಗ್ಗದ ಸ್ಪೈಕ್ ಗಳನ್ನು ಧರಿಸಿಯೆ 100 ಮತ್ತು 200 ಮೀಟರ್ ಸ್ಪರ್ಧೆಯಲ್ಲಿ ಚಿನ್ನವನ್ನುತನ್ನದಾಗಿಸಿಕೊಡಳು.  ಅಂದು ಈಕೆಯ ಸಾಮರ್ಥ್ಯ ವನ್ನು ನೋಡಿದ ಯುವಜನ ಕಲ್ಯಾಣ ನಿರ್ದೇಶನಾಲಯದೊಂದಿಗೆ ಗುರುತಿಸಿದ್ದು ಅಥ್ಲೆಟಿಕ್ಸ್ ಕೋಚ್ ನಿಪೋನ್. ತನ್ನ ಗ್ರಾಮದಿಂದ 140 ಕಿ.ಮೀ. ಗುವಾಹಾಟಿಗೆ ಆಕೆಯನ್ನು ಸ್ಥಳಾಂತರಿಸಲು ಹಿಮಾಳ ಪೋಷಕರಿಗೆ ನಿಪೋನ್ ತಿಳಿಸಿದರು.  ಆದರೆ ಅದಕ್ಕೆ ಆಕೆಯ ಪೋಷಕರು ಮೊದಲು ಒಪ್ಪಲಿಲ್ಲ ಆದರೂ ಅವರ ಮನವಲಿವವರೆಗು ನಿಪೋನ್ ಬಿಡಲಿಲ್ಲ.

ನಂತರ ನಿಪಾನ್ ಸರ್ಮಜಾಯಿ ಕಾಂಪ್ಲೆಕ್ಸ್ ಬಳಿ ಬಾಡಿಗೆ ಕೊಠಡಿಯಲ್ಲಿ ಉಳಿಯಲು ಹಿಮಾಳಿಗೆ ವ್ಯವಸ್ಥೆ ಮಾಡಿದರು. ಅಂತಿಮವಾಗಿ ಅವರು ರಾಜ್ಯದ ಅಕಾಡೆಮಿಯೊಳಗೆ ಆಕೆಯನ್ನು ಸರಿಸಿಕೊಳ್ಳಲು ಅಧಿಕಾರಿಗಳ ಮನವೊಲಿಸಿದರು. ಕೇವಲ ಬಾಕ್ಸಿಂಗ್ ಮತ್ತು ಫುಟ್ಬಾಲ್ನಲ್ಲಿ ಪರಿಣತಿ ಪಡೆದುಕೊಂಡಿದ್ದ ಅಕಾಡೆಮಿ, ಅಥ್ಲೆಟಿಕ್ಸ್ ಎಂದು ಯಾವುದೇ ಪ್ರತ್ಯೇಕ ವಿಭಾಗ ಹೊಂದಿರಲಿಲ್ಲ. ಸತತ ಕಠಿಣ ಅಭ್ಯಾಸ ಮಾಡುತ್ತಿದ್ದ ಹಿಮಾದಾಸ್ ದಿನದಿಂದ ದಿನಕ್ಕೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಾ ಸಾಗಿದರು. ನಂತರ 100 ಮೀಟರ್ ನಿಂದ 400 ಮೀಟರ್ ಗೆ ಬದಲಾವಣೆ ಮಾಡಿಕೊಂಡರು.

ಕಠಿಣ ಅಭ್ಯಾಸ ಮಾಡುತ್ತಿದ್ದ ಹಿಮಾದಾಸ್  ಫಿನ್ ಲ್ಯಾಂಡ್ ನಲ್ಲಿ ನಡೆದೆ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಾಖಲೆ ನಿರ್ಮಾಣ ಮಾಡಿದ್ದು, ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಅಂಡರ್ 20 ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಗೈದಿದ್ದಾರೆ. 18 ವರ್ಷದ ಹಿಮದಾಸ್ 400 ಮೀಟರ್ ಓಟವನ್ನು ಕೇವಲ 51.46 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸುವ ಮೂಲಕ ಅಗ್ರಸ್ಥಾನಗಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದುವರೆಗೆ ಭಾರತೀಯರು ಮಾಡದ ಸಾಧನೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಹಿಮಾ ದಾಸ್. ಇದಕ್ಕು ಮೊದಲು ಜಾವಲಿನ್ ಥ್ರೋ ದಲ್ಲಿ ನೀರಲ್ ಚೋಪ್ರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಅದು ಫೀಲ್ಡ್ ಇವೆಂಟ್ ಅದರೆ  ಟ್ರ್ಯಾಕ್ ನಲ್ಲಿ ಮೊದಲ ಚಿನ್ನ ಗೆದ್ದ ಶ್ರೇಯ ಹಿಮಾ ದಾಸರದ್ದು….

One thought on “World Champion Hima das : ಅಸ್ಸಾಂನ ಗದ್ದೆಯಿಂದ ವಿಶ್ವ ಚಾಂಪಿಯನ್ – ಹಿಮಾ ದಾಸ ..

Leave a Reply

Your email address will not be published.

Social Media Auto Publish Powered By : XYZScripts.com