ಇಂದಿನಿಂದ ಆರಂಭವಾಗಿವೆ ಹೊಸ ತೆರಿಗೆಗಳು – ಸಾಮಾನ್ಯರ ಜೇಬಿಗೆ ಬೀಳಲಿದೆ ಕತ್ತರಿ..!

ಕರ್ನಾಡಕದ ಮಹಾಜನರೆ ಹುಷಾರ್..!
ಬೇಲೆ  ಎರಿಕೆಯಿಂದ ಕಂಗಾಲಾಗಿರವ  ಜನಸಾಮಾನ್ಯರಿಗೆ ಈಗ ಮತ್ತೊಂದು ಶಾಕ್ . ಇಂದಿನಿಂದ ಸದ್ದಿಲ್ಲದೆ ಜಾರಿಯಾಗುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಹೊಸ ತೆರಿಗೆಯ ಬರೆ  ಬಿದ್ದಿದೆ.. ನಾವು ದಿನನಿತ್ಯ ಬಳಸುವ ಪೆಟ್ರೋಲ್,ಡೀಸೆಲ್ ಹಾಗೂ ವಿದ್ಯುತ್ ದರ ಹೆಚ್ಚಳವಾಗಿವೆ.. ಇತ್ತೀಚಿಗೆ ಮುಖ್ಯಮಂತ್ರಿಗಳು ಮಂಡಿಸಿರುವ ಬಜೆಟ್ ನ ಉಡುಗೊರೆಯ ಅನುಷ್ಠಾನಕ್ಕೆ ಸಂಪನ್ಮೂಲ ಕ್ರೋಡಿಕರಣಕ್ಕೆ ಮುಂದಾಗಿರುವ ರಾಜ್ಯ ಸರಕಾರ ಅದಕ್ಕಾಗಿ ತೆರಿಗೆ ಹೆಚ್ಚಳದ ಮಾರ್ಗ ಹಿಡಿದಿದ್ದು ಜನಸಾಮಾನ್ಯರನ್ನು ಕಂಗಾಲಾಗುವಂತೆ ಮಾಡಿದೆ.


ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಮಂಡಿಸಿರುವ ಸಾಲಮನ್ನಾ ಗೆ ಹಣ ಹೊಂದಿಸಲು ಸರಕಾರ ಶುಕ್ರವಾರ ಅಧಿಸೂಚನೆಯನ್ನು ಹೊರಡಿಸಿದ್ದು ಈ ಪ್ರಕಾರ ಪೆಟ್ರೋಲ್, ಡೀಸೆಲ್, ವಿದ್ಯುತ್ ಹಾಗೂ ಮದ್ಯದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿ ಅದನ್ನು ಇಂದಿನಿಂದ ಜಾರಿಗೆ ತರುವಂತೆ ಆದೇಶ ಹೊರಡಿಸಿದೆ. ಈ ವಿಧೇಯಕದ ಅಂಗೀಕಾರ ಗುರುವಾರವೇ ಉಭಯ ಸದನಗಳಲ್ಲಿ ಆಗಿತ್ತಾದರೂ ಸಹ ನೆನ್ನೆ ರಾಜ್ಯಪಾಲರಿಂದ ಅಂಗೀಕಾರ ಪಡೆದು ಇಂದಿನಿಂದ ಈ ಮೇಲಿನ ವಸ್ತುಗಳ ಮೇಲೆ ಹೊಸ ದರ ಜಾರಿಯಾಗಲಿದೆ.

ಸಾಲಮನ್ನಾದ 34000 ಕೋಟಿ ಮೊತ್ತವನ್ನು ಹೊಂದಿಸುವ ಗುರಿ ಹೊಂದಿರತಕ್ಕಂತಹ ಸರಕಾರ ಇದಕ್ಕಾಗಿ ಪೆಟ್ರೋಲ್, ಡೀಸೆಲ್, ವಿದ್ಯುತ್, ಮದ್ಯಕ್ಕೆ ಹೆಚ್ಚುವರಿ ಸೆಸ್ ವಿಧಿಸಿ 3000 ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಹಾಕಿಕೊಂಡಿದೆ. ವಿದ್ಯುತ್ ಮೇಲೆ ರಾಜ್ಯ ಸರಕಾರವು ಶೇಕಡಾ 03 ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿರುವುದರಿಂದ 1000 ರೂಪಾಯಿ ವಿದ್ಯುತ್ ಬಿಲ್ ಬರುವ ಕಡೆ 30 ರೂಪಾಯಿಯಷ್ಟು ಹೆಚ್ಚುವರಿ ಮೊತ್ತ ಸೇರ್ಪಡೆಯಾಗಲಿದೆ. ಮದ್ಯದ ಮೇಲೂ ಸಹ ಶೇಕಡಾ 04 ರಷ್ಟು ತೆರಿಗೆ ವಿಧಿಸಿರುವ ಸರಕಾರದ ನಿರ್ಧಾರದಿಂದ ನೀವು 1500 ರುಪಾಯಿಯ ಮದ್ಯ ಖರೀದಿ ಮಾಡಿದ್ದಲ್ಲಿ ನೀವು 60 ರೂಪಾಯಿಯಷ್ಟು ಹೆಚ್ಚುವರಿ ಹಣವನ್ನು ಇನ್ನು ತೆರಬೇಕಾಗುತ್ತದೆ. ಮದ್ಯದ ಮೇಲಿನ ಹೆಚ್ಚುವರಿ ತೆರಿಗೆಯೂ ಮುಂದಿನ ತಿಂಗಳು ಆಗಸ್ಟ್ 01 ರಿಂದ ಜಾರಿಗೆ ಬರಲಿದೆ.

ಪೆಟ್ರೋಲ್ ಮೇಲಿನ ತೆರಿಗೆಯನ್ನು ರಾಜ್ಯ ಸರಕಾರ ಶೇಕಡಾ 30 ರಿಂದ 32 ಕ್ಕೆ ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದು ಇದರಿಂದ ಪ್ರತಿ ಲೀಟರ್ ಮೇಲೆ 1 ರೂಪಾಯಿ 14 ಪೈಸೆಯಷ್ಟು ಹೆಚ್ಚಳವಾಗಲಿದ್ದು ಒಂದು ವೇಳೆ ನೀವು 50 ಲೀಟರ್ ಪೆಟ್ರೋಲ್ ಬಳಕೆ ಮಾಡಿದ್ದಲ್ಲಿ 57 ರೂಪಾಯಿಯಷ್ಟು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗಿದೆ. ಇನ್ನು ಡೀಸೆಲ್ ಮೇಲಿನ ಸೆಸ್ ಕೂಡ ಹೆಚ್ಚಳಗೊಂಡಿದ್ದು ಶೇಕಡಾ 19 ರಿಂದ 21 ಕ್ಕೇರಿದೆ. ಇದರಿಂದ ಪ್ರತಿ ಲೀಟರ್ ಮೇಲೆ 1 ರೂಪಾಯಿ 12 ಪೈಸೆಯಷ್ಟು ಹೆಚ್ಚಳವಾಗಲಿದೆ.

ರಾಜ್ಯ ಸರಕಾರದ ಈ ನಿರ್ಧಾರದ ಬಗ್ಗೆ ಕನ್ನಡಿಗರು ಆಕ್ರೋಶಗೊಂಡಿದ್ದು ಪೆಟ್ರೋಲ್ – ಡೀಸೆಲ್ ಮೇಲೆ ಕುಮಾರಸ್ವಾಮಿ ಸರಕಾರ ಹೆಚ್ಚುವರಿ ಸೆಸ್ ವಿಧಿಸಿರುವುದರಿಂದ ಮುಂಬರುವ ದಿನಗಳಲ್ಲಿ ಜನಸಾಮಾನ್ಯರ ದಿನನಿತ್ಯದ ಬದುಕಿಗೆ ಸಮಸ್ಯೆ ಉಂಟಾಗಲಿದ್ದು ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಯಿಂದ ಸರಕು – ಸಾಗಣೆ ದರ ಹೆಚ್ಚಳವಾಗಲಿದ್ದು ಜನರ ಜೀವನಾವಶ್ಯಕವಾದ ಹಾಲು, ತರಕಾರಿ, ದಿನಸಿ ಬೆಲೆ ಸೇರಿದಂತೆ ಆಟೋ, ಬಸ್, ಟ್ಯಾಕ್ಸಿ ದರವೂ ಸಹ ತುಟ್ಟಿಯಾಗುವ ಸಾಧ್ಯತೆಗಳು ಕಂಡುಬರುತ್ತಿದೆ.

Leave a Reply

Your email address will not be published.