ಸ್ಯಾಂಡಲ್ ವುಡ್ ನಲ್ಲಿ ” ಕುರುಕ್ಷೇತ್ರ ” : CM HDK ಪುತ್ರನಿಗು ದರ್ಶನ್ ನಡಿತಿದೆ ಗುದ್ದಾಟ….!

ಸ್ಯಾಂಡಲ್ ವುಡ್ ನಲ್ಲಿ ಎಚ್.ಡಿ.ಕೆ ಪುತ್ರ ನಿಖಿಲ್ ಗೌಡ ಹಾಗೂ ಸ್ಟಾರ್ ನಟ ದರ್ಶನ್ ನಡುವೆ ಮುಸುಕಿನ ಗುದ್ದಾಟ..!? ಹೀಗೆ ಎಲ್ಲರು ಮಾತನಾಡುತ್ತಿದ್ದಾರೆ, ಇದಕ್ಕೆ ಕಾರಣ ಇಲ್ಲದಿಲ್ಲ.. ಮಹಾಭಾರತ ಕಥೆಯನ್ನು ಆದರಿಸಿದ ಬಹುತಾರಾಗಣದ ಚಿತ್ರದಲ್ಲಿ ದರ್ಶನ್ ತೂಗುದೀಪ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ನಡುವೆ ನಡೆದಿದೆ ಎಂಬ ಗಾಸಿಪ್ ಕೇಳಿ ಬರುತ್ತಿದೆ.

ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡರಿಗಾಗಿ ಈ ಕುರುಕ್ಷೇತ್ರ ಚಲನಚಿತ್ರದ ಮೂಲಕಥೆಯನ್ನೇ ಬದಲಿಸಲಾಗಿದೆ ಎಂಬ ಅಸಮಾಧಾನ ದರ್ಶನ್ ತೂಗುದೀಪರಿಗೆ ಇದೆ . ನಾಗಣ್ಣ ರವರ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾದಲ್ಲಿ ದರ್ಶನ್ ತೂಗುದೀಪ ಅವರಿಗೆ ದುರ್ಯೋಧನನ ಪಾತ್ರ ಹಾಗೂ ನಿಖಿಲ್ ಗೌಡ ಅವರಿಗೆ ಅಭಿಮನ್ಯು ಪಾತ್ರ ಮಾಡಿದ್ದು, ಈ ಚಿತ್ರದ ಮೂಲಕಥೆಯಲ್ಲಿ ದುರ್ಯೋಧನನ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದ್ದು ಆದರೆ ದಿನಗಳೆದಂತೆ ದುರ್ಯೋಧನನ ಪಾತ್ರಕ್ಕಿಂತ ನಿಖಿಲ್ ಗೌಡ ಅಭಿನಯ ಮಾಡುತ್ತಿರುವ ಅಭಿಮನ್ಯು ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ನಟರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

ಸಾಕಷ್ಟು ಶ್ರಮಪಟ್ಟು ದುರ್ಯೋಧನನ ಪಾತ್ರ ಮಾಡಿದ್ದ ದರ್ಶನ್ ಈ ಮೊದಲು ಕುರುಕ್ಷೇತ್ರ ಚಿತ್ರವನ್ನು ತಮ್ಮ 50 ನೇ ಚಿತ್ರವೆಂದು ಘೋಷಿಸಿದ್ದರು. ಆದರೆ ಈ ಚಿತ್ರದಲ್ಲಿ ತಮ್ಮ ದುರ್ಯೋಧನನ ಪಾತ್ರಕ್ಕಿಂತ ನಿಖಿಲ್ ಗೌಡರ ಅಭಿಮನ್ಯು ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿರುವುದರಿಂದ ಬೇಸರಗೊಂಡಿರುವ ದಚ್ಚು ಈ ಕುರುಕ್ಷೇತ್ರ ಚಲನಚಿತ್ರದ ಮೊದಲ ಕಾಪಿ ನೋಡಿದ ಬಳಿಕ ಇದರಲ್ಲಿ ತಮಗೆ ಹೆಚ್ಚಿನ ಪ್ರಾಮುಖ್ಯತೆ ಸಿಗದೇ ಇದ್ದಲ್ಲಿ ತಮ್ಮ 50 ನೇ ಚಿತ್ರವನ್ನಾಗಿ ತಮ್ಮ ಮುಂದಿನ “ಯಜಮಾನ” ಚಲನಚಿತ್ರವನ್ನು ಘೋಷಿಸುವ ಸಾಧ್ಯತೆ ಇದೆ.


ಮೂಲಕಥೆ ಪ್ರಕಾರ ಈ ಕುರುಕ್ಷೇತ್ರ ಚಲನಚಿತ್ರದಲ್ಲಿ ನಿಖಿಲ್ ಗೌಡರ ಅಭಿಮನ್ಯು ಪಾತ್ರಕ್ಕೆ ಕೇವಲ 12 ನಿಮಿಷ ಮಾತ್ರ ಅವಕಾಶ ಇತ್ತು. ಆದರೆ ದಿನಗಳೆದಂತೆ, ಶೂಟಿಂಗ್ ಮುಂದುವರೆದಂತೆ ನಿಖಿಲ್ ಗೌಡರ ಪಾತ್ರಕ್ಕೆ 30 ಕ್ಕೂ ಹೆಚ್ಚು ನಿಮಿಷಕ್ಕೂ ಹೆಚ್ಚು ಸಮಯ ನೀಡಲಾಗಿದೆ ಎನ್ನುವ ವಿಚಾರಕ್ಕೆ ಈ ಮುಸುಕಿನ ಗುದ್ದಾಟ ಆರಂಭವಾಗಿದೆ.  ಈ ಚಲನಚಿತ್ರದಲ್ಲಿ ಪ್ರಥಮ ಭಾಗದಲ್ಲಿ ದುರ್ಯೋಧನನ ಆರ್ಭಟವಿದ್ದು ಎರಡನೆಯ ಭಾಗದಲ್ಲಿ ಅಭಿಮಾನ್ಯುನ ಆರ್ಭಟ ಇದೆ ಎಂದು ಹೇಳಲಾಗುತ್ತಿದೆ. ನಿಖಿಲ್ ಗೌಡರ ಪಾತ್ರಕ್ಕೆ ಹೆಚ್ಚಿನ ಸಮಯ ನೀಡಲು ಅವರ ತಂದೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹಾಗೂ ಈ ಚಿತ್ರದ ನಿರ್ಮಾಪಕ ಮುನಿರತ್ನ ನಾಯ್ಡುರ ನಡುವಿನ ಒಡನಾಟವೆ ಕಾರಣ . ಬಹುತಾರಗಣದ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ರವಿಚಂದ್ರನ್, ಅಂಬರೀಷ್, ಅರ್ಜುನ್ ಸರ್ಜಾ, ಶಶಿಕುಮಾರ್, ರವಿಶಂಕರ್, ಸೋನು ಸೂದ್ ನಟಿಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com