ಗಂಟೆಯಲ್ಲಿ ಸಿಎಂ ಕುರ್ಚಿಯಿಂದ ಇಳಿಯಬಲ್ಲೆ, ಖುರ್ಚಿಗೆ ಅಂಟಿ ಕೂತಿಲ್ಲ – CM HDK

ಮನಸ್ಸು ಮಾಡಿದರೇ 2 ಗಂಟೆಯಲ್ಲಿ ಸಿಎಂ ಕುರ್ಚಿಯಿಂದ ಇಳಿಯಬಲ್ಲೆ. ನಾನು ಸಿಎಂ ಖುರ್ಚಿಗೆ ಅಂಟಿ ಕೂತಿಲ್ಲ. ಸಿಎಂ ಕುರ್ಚಿ ಹೋಗುತ್ತೆ ಅಂತಾ ನಾನು ಕಣ್ಣೀರು ಹಾಕುತ್ತಿಲ್ಲ. ಜನ ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಅಂತಾ ಕಣ್ಣೀರಿಟ್ಟೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಇಂದು ಬೆಂಗಳೂರಿನಲ್ಲಿರುವ ಜೆಡಿಎಸ್ ನ ಜೆಪಿ ಕಚೇರಿಯಲ್ಲಿ ಜೆಡಿಎಸ್ ಸನ್ಮಾನ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು, ಕಾರ್ಯಕ್ರಮದಲ್ಲಿ ಮಾತನಾಡುತ್ತ ಭಾವುಕಾರದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಎಲ್ಲ ವಿಷವನ್ನ ನಾನೇ ಕುಡಿದು ವಿಷಕಂಠನಾಗಿ ಬದುಕುತ್ತಿದ್ದೇನೆ, ನಾನು ವಿಷ ನುಂಗಿ ನಿಮಗೆ ಅಮೃತ ನೀಡುತ್ತೇನೆ. ನಾನು ಮುಖ್ಯಮಂತ್ರಿ ಆಗಿದ್ದಕ್ಕೆ ನೀವೆಲ್ಲ ಸಂತೋಷವಾಗಿದ್ದೀರಾ. ಆದರೆ ನಾನು ಸಂತೋಷವಾಗಿಲ್ಲ. ನಾನು ಹೋದ ಕಡೆಯಲ್ಲಿ ಜನ ಸಾಕಷ್ಟು ಸೇರುತ್ತಾರೆ.ಆದರೆ ಮತ ನೀಡುವಾಗ ಮಾತ್ರ ಯಾಕೋ ಮರೆಯುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ರೈತರನ್ನ ಉಳಿಸಲು ದಿಟ್ಟ ನಿರ್ಧಾರ ಮಾಡಿದ್ದೇನೆ. ಬೇರೆ ರಾಜ್ಯಗಳು ಇಂತಹ ನಿರ್ಧಾರ ಮಾಡಿಲ್ಲ. ಸಂಕಷ್ಟಗಳ ಮಧ್ಯೆ ಸಾಲಮನ್ನಾ ಮಾಡಿದ್ದೇನೆ, ಸಾಲಮನ್ನಾದಿಂದ ಪ್ರತಿ ಕುಟುಂಬಕ್ಕೆ 1 ಲಕ್ಷ ರೂ. ಸಿಗುತ್ತದೆ 22ಲಕ್ಷ ರೈತರಿಗೆ ಅನೂಕೂಲವಾಗಿದೆ. ಇದರಿಂದ ಇನ್ನು ನಿಮಗೆ ಸಮಾಧಾನವಾಗಿಲ್ಲವೇ ಎಂದು ಪ್ರಶ್ನಿಸಿದರು.

7ಕೆಜಿ ಅಕ್ಕಿ ಕೊಡಲು ಅಭ್ಯಂತರವಿಲ್ಲ. ಅನ್ನಭಾಗ್ಯ ಅಕ್ಕಿಕಡಿತಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದಾರೆ. 2 ಕೆಜಿ ಅಕ್ಕಿ ಕೊಡುವುದರಿಂದ 2500 ರೂ ಕೋಟಿ ಹೊರೆ ಬೀಳಲಿದೆ. ಇದನ್ನ ನಾನು ಎಲ್ಲಿಂದ ತರಲಿ. ಸಾಲಮನ್ನಾ ಮಾಡಿ ಅಂತಾರೆ. ಆದರೆ ತೆರಿಗೆ ಹೆಚ್ಚಳ ಮಾಡಿದರೇ ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published.