ಮೈತ್ರಿಯಲ್ಲಿ ಎಲ್ಲವು ಸರಿಯಿಲ್ಲ, ಸರಕಾರದಲ್ಲಿ ಇರುವವರು ಏನ್ ಮಾಡ್ತಿದ್ದಾರೆ? ಮಾಜಿ CM ಗರಂ..!

ಒಂದಡೆ ಕೈತಪ್ಪಿದ ಅಧಿಕಾರ, ಇನ್ನೊಂದಡೆ ತಮ್ಮ ಬಜೆಟ್ ನ್ನು ಮುಂದುವರೆಸದೆ ಹೊಸ ಬಜೆಟ್ ಮಂಡಿಸಿದ್ದು, ಜೊತೆಗೆ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕಡಿತದಿಂದ ಆಕ್ರೋಶಗೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಇಗ ತಮ್ಮ ಪಕ್ಷದ ಸಚಿವರಗಳ ಮೇಲೆ ಬಿದ್ದಿದ್ದಾರೆ.

ಸರಕಾರಕ್ಕೆ ತೆರಿಗೆ ಕಟ್ಟಿ ಕಟ್ಟಿ ಹೈರಣಾಗಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಶಾಕ್ ತರುವಂತಹ ವಿಚಾರ ಇಂದಿನಿಂದ ಸದ್ದಿಲ್ಲದೆ ಜಾರಿಯಾಗುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ನಾವು ದಿನನಿತ್ಯ ಬಳಸುವ ಪೆಟ್ರೋಲ್,ಡೀಸೆಲ್ ಹಾಗೂ ವಿದ್ಯುತ್ ದರ ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ತೆರಿಗೆಯ ಬರೆ ಎಳೆಯುತ್ತಿದೆ. ಇತ್ತೀಚಿಗೆ ಮುಖ್ಯಮಂತ್ರಿಗಳು ಮಂಡಿಸಿರುವ ಬಜೆಟ್ ನಲಿನ ಸಾಲಮನ್ನಾ ಉಡುಗೊರೆಯ ಅನುಷ್ಠಾನಕ್ಕೆ ಸಂಪನ್ಮೂಲ ಕ್ರೋಡಿಕರಣಕ್ಕೆ ಮುಂದಾಗಿರುವ ರಾಜ್ಯ ಸರಕಾರ ಅದಕ್ಕಾಗಿ ತೆರಿಗೆ ಹೆಚ್ಚಳದ ಮಾರ್ಗ ಹಿಡಿದಿದ್ದು ಜನಸಾಮಾನ್ಯರನ್ನು ಕಂಗಾಲಾಗುವಂತೆ ಮಾಡಿದೆ. ಇದರ ವಿರುದ್ಧ ಇದೀಗ ಸಿದ್ದರಾಮಯ್ಯ ಸಿಡಿದೆದ್ದಿದ್ದಾರೆ.


ಕುಮಾರಸ್ವಾಮಿ ಸರಕಾರ ಶುಕ್ರವಾರ ಅಧಿಸೂಚನೆಯನ್ನು ಹೊರಡಿಸಿದ್ದು ಈ ಪ್ರಕಾರ ಪೆಟ್ರೋಲ್, ಡೀಸೆಲ್, ವಿದ್ಯುತ್ ಹಾಗೂ ಮದ್ಯದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿ ಅದನ್ನು ಇಂದಿನಿಂದ ಜಾರಿಗೆ ತರುವಂತೆ ಆದೇಶ ಹೊರಡಿಸಿದೆ. ಈ ವಿಧೇಯಕದ ಅಂಗೀಕಾರ ಗುರುವಾರವೇ ಉಭಯ ಸದನಗಳಲ್ಲಿ ಆಗಿತ್ತಾದರೂ ಸಹ ನೆನ್ನೆ ರಾಜ್ಯಪಾಲರಿಂದ ಅಂಗೀಕಾರ ಪಡೆದು ಇಂದಿನಿಂದ ಈ ಮೇಲಿನ ವಸ್ತುಗಳ ಮೇಲೆ ಹೊಸ ದರ ಜಾರಿಯಾಗಲಿದೆ. ಇದಕ್ಕೂ ಮೊದಲು ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರತಕ್ಕಂತಹ ಸಿದ್ದರಾಮಯ್ಯರು ಪತ್ರ ಮುಖೇನ ತಮ್ಮ ಅಸಮಾಧಾನ ತೋರ್ಪಡಿಸಿ ತೆರಿಗೆ ಹೆಚ್ಚಳ ಮಾಡದಂತೆ ಮನವಿ ಮಾಡಿದ್ದರು.
ರೈತರ ಸಾಲಮನ್ನಾ ಮಾಡಿ ಅದರ ಹೊರೆಯನ್ನು ಅವರ ಮೇಲೆ ಹಾಗೂ ಜನಸಾಮಾನ್ಯರ ಮೇಲೆ ತೆರಿಗೆಯಾಗಿ ಹೊರಿಸಿರುವ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ವಿರುದ್ಧ ಸಿದ್ದರಾಮಯ್ಯನವರು ಆಕ್ರೋಶ ವ್ಯಕ್ತಪಡಿಸಿದ್ದು ಬಜೆಟ್ ಮಂಡನೆಯಾಗುತ್ತಿದ್ದಂತೆ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಏರಿಕೆಯನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದೆ, ಇದರ ಜೊತೆಗೆ ಬಹಿರಂಗವಾಗಿ ಸಹ ಹೇಳಿಕೆ ಕೊಟ್ಟಿದ್ದೆ, ಆದರೂ ಸಹ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಕುಮಾರಸ್ವಾಮಿ ಯವರ ಮೇಲೆ ಒತ್ತಡ ಹಾಕಿ ತೆರಿಗೆ ವಾಪಸ್ ಪಡೆಯಲು ಪ್ರಯತ್ನ ಪಟ್ಟಿಲ್ಲ, ಈ ತೆರಿಗೆ ಏರಿಕೆಯಿಂದ ವ್ಯತಿರಿಕ್ತ ಪರಿಣಾಮಗಳು ಎದುರಾಗಲಿದ್ದು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಅವರು ಸರಕಾರದಲ್ಲಿ ಏನು ಮಾಡುತ್ತಿದ್ದಾರೆ ಎಂದೇ ತಿಳಿಯುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಕ್ರೋಶ ವ್ಯಕ್ತಪಡಿಸಿದ್ದಾರೆ..

One thought on “ಮೈತ್ರಿಯಲ್ಲಿ ಎಲ್ಲವು ಸರಿಯಿಲ್ಲ, ಸರಕಾರದಲ್ಲಿ ಇರುವವರು ಏನ್ ಮಾಡ್ತಿದ್ದಾರೆ? ಮಾಜಿ CM ಗರಂ..!

  • July 15, 2018 at 4:27 AM
    Permalink

    Hurrah! At last I got a website from where I can truly get helpful
    data concerning my study and knowledge.

    Reply

Leave a Reply

Your email address will not be published.

Social Media Auto Publish Powered By : XYZScripts.com