ಗ್ರಾಮವಾಸ್ತವ್ಯ ಮಾಡಲು ಸಮಯವಿಲ್ಲ, 4 ಹಂತದಲ್ಲಿ ಸಾಲ ಮನ್ನಾ – ದೇವೇಗೌಡ ..

ಕುಮಾರಸ್ವಾಮಿ ಏಕೆ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. 18 ಗಂಟೆ ಕೆಲಸ ಮಾಡುವಾಗ ಅವರಿಗೆ ಗ್ರಾಮವಾಸ್ತವ್ಯ ಮಾಡಲು ಸಮಯವೆಲ್ಲಿ ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಜೆಡಿಎಸ್ ಸನ್ಮಾನ ಕಾರ್ಯಕ್ರಮದಲ್ಲಿ ಇಂದು ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಾಗಿನಿಂದ ಕುಮಾರಸ್ವಾಮಿ 18 ಗಂಟೆ ಕಾಲ ಕೆಲಸ ಮಾಡುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ನನಗೆ ಆತಂಕವಿದೆ. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಾಡಿಗಾಗಿ ದುಡಿಯುತ್ತಿರುವ ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ ಎಂದು ತಿಳಿಸಿದರು.

ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಲಿದ್ದಾರೆ: ಸ್ವಲ್ಪ ಸಮಾಯಾವಕಾಶ ನೀಡಿ- ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಮನವಿ…
ರೈತರ ಸಾಲಮನ್ನಾ ಮಾಡಿದ ಹಾಗೆಯೇ ಸ್ತ್ರೀಶಕ್ತಿ ಸಂಘದ ಸಾಲವನ್ನು ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನ್ನಾ ಮಾಡಲಿದ್ದಾರೆ. ಆದರೆ ಜನತೆ ಸ್ವಲ್ಪ ಸಮಾಯಾವಕಾಶ ನೀಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮನವಿ ಮಾಡಿದ್ದಾರೆ.

ಸಾಲ ಮನ್ನಾ ಮಾಡಬೇಕಾದರೆ ಹಣಕಾಸು ಕ್ರೋಢೀಕರಣವಾಗಬೇಕು. ಒಂದೇ ಸಾರಿ ಸಾಲಮನ್ನಾ ಮಾಡಲು ಆಗುತ್ತಾ..? ಹೀಗಾಗಿ ನಾಲ್ಕು ಹಂತಗಳಲ್ಲಿ ಕುಮಾರಸ್ವಾಮಿ ಮನ್ನಾ ಮಾಡಲಿದ್ದಾರೆ. ಸ್ವಲ್ಪ ಸಮಾಯಾವಕಾಶ ನೀಡಬೇಕು ಎಂದು ಹೆಚ್.ಡಿ ದೇವೇಗೌಡರು ಮನವಿ ಮಾಡಿದರು.

ಬಿಜೆಪಿಯವರ ಆಟವನ್ನು ಗಮನಿಸುತ್ತಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾವ ಕಾರಣಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದಾರೆ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು.ಸುಖಾಸುಮ್ಮನೆ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

Leave a Reply

Your email address will not be published.

Social Media Auto Publish Powered By : XYZScripts.com