ಸಧ್ಯದಲ್ಲೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ – ಶಿಕ್ಷಣ ಸಚಿವ ಜಿ.ಟಿ ದೇವೇಗೌಡ…

ಇನ್ನು ಯಾವ ಜಿಲ್ಲೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆಗಿಲ್ಲ. ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಅತೀ ಶೀಘ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರು ಸ್ಪಷ್ಟನೆ ನೀಡಿದರು.


ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇಂದು ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, ಜುಲೈ 20 ನೇ ತಾರೀಕು ಸಿ ಎಂ ಕುಮಾರಸ್ವಾಮಿ ಕೆ ಆರ್ ಎಸ್ ,ಕಬಿನಿ ಜಲಾಶಯಕ್ಕೆ ಭಾಗಿನ ಅರ್ಪಿಸಲಿದ್ದಾರೆ. ಇದಕ್ಕು ಮುನ್ನ ಮೊದಲ ಆಷಾಡ ಶುಕ್ರವಾರದ ಪೂಜೆ ಸಲ್ಲಿಸಲಿದ್ದಾರೆ. ಅಂದು ಮುಂಜಾನೆ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಅತೀ ಶೀಘ್ರದಲ್ಲಿ ಮೈಸೂರು ವಿವಿ ಕುಲಪತಿ ನೇಮಕ…

ಹಲವು ದಿನಗಳಿಂದ ಮೈಸೂರು ವಿವಿಗೆ ಕುಲಪತಿಗಳು ನೇಮಕವಾಗಿಲ್ಲ. ಹೀಗಾಗಿ ಅತೀ ಶೀಘ್ರದಲ್ಲಿ ಮೈಸೂರು ಕುಲಪತಿ ನೇಮಕ ಮಾಡಲಾಗುತ್ತದೆ ಎಂದು ಜಿಟಿಡಿ ತಿಳಿಸಿದ್ದಾರೆ. ಹಾಗೆಯೇ ಕೆ ಎಸ್ ಒಯು ಮಾನ್ಯತೆ ವಿಚಾರ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆದಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com