Ramayan train : ರೈಲ್ವೇ ಇಲಾಖೆಯ ಹೊಸ ರೈಲು – ರಾಮಭಕ್ತರಲ್ಲಿ ಪುಳಕ ….

ರಾಮಭಕ್ತರಿಗೆ ಪುಳಕ ಉಂಟು ಮಾಡಿದೆ ರೈಲ್ವೇ ಇಲಾಖೆಯ ಈ ಹೊಸ ರೈಲು..!
ನಮ್ಮ ರಾಮಾಯಣ ಮಹಾ ಕಾವ್ಯದೊಂದಿಗೆ ತಳುಕು ಹಾಕಿಕೊಂಡಿದ್ದ ಸ್ಥಳಗಳನ್ನು ಜನರಿಗೆ ಪರಿಚಯ ಮಾಡಲು ರಾಮಾಯಣ ಎಕ್ಸ್ ಪ್ರೆಸ್ ಎಂಬ ವಿಶೇಷ ಪ್ರವಾಸಿ ರೈಲನ್ನು ರೈಲ್ವೆ ಇಲಾಖೆಯು ನವೆಂಬರ್ ಹದಿನಾಲ್ಕರಂದು ಚಾಲನೆ ನೀಡಲಿದೆ. ಈ ವಿಶೇಷ ಪ್ರವಾಸಿ ರೈಲಿನಲ್ಲಿ ರಾಮಾಯಣದಲ್ಲಿ ಉಲ್ಲೇಖಗೊಂಡಿರುವ ಹಲವಾರು ಸ್ಥಳಗಳನ್ನು ಸಂದರ್ಶಿಸುವ ಅವಕಾಶ ಲಭಿಸಲಿದ್ದು, ಈ ರೈಲು ದೆಹಲಿಯ ಸಫ್ದರ್ ಜಂಗ್ ರೈಲ್ವೇ ನಿಲ್ದಾಣದಿಂದ ಹೊರಡಲಿದೆ. ಈ ರಾಮಾಯಣ ಎಕ್ಸ್ಪ್ರೆಸ್ ರೈಲು ಅಯೋಧ್ಯೆಯಿಂದ ಆರಂಭವಾಗಿ ರಾಮೇಶ್ವರದವರೆಗೆ ಪ್ರಯಾಣಿಸಲಿದೆ.

ಈ ರಾಮಾಯಣ ಎಕ್ಸ್ಪ್ರೆಸ್ ಪ್ರಯಾಣದ ಅವಧಿ ಹದಿನಾರು ದಿನಗಳದ್ದಾಗಿದ್ದು ದೆಹಲಿಯಿಂದ ಹೊರಟು ಇದು ಮೊದಲ ನಿಲುಗಡೆಯನ್ನು ಅಯೋಧ್ಯೆಯಲ್ಲಿ ಮಾಡಲಿದೆ. ಅಲ್ಲಿಂದ ಮುಂದೆ ನಂದಿಗ್ರಾಮ, ಸೀತಾಮಡಿ, ಜನಕಪುರ, ವಾರಣಾಸಿ, ಪ್ರಯಾಗ್ ಶೃಂಗವೇರಾಪುರ, ಚಿತ್ರಕೂಟ ಹಾಗೂ ನಮ್ಮ ಕರ್ನಾಟಕದ ಹಂಪಿ ಸಮೀಪವಿರುವ ಹೊಸಪೇಟೆ, ನಾಸಿಕ್ ಮತ್ತು ರಾಮೇಶ್ವರದ ರೈಲ್ವೆ ನಿಲ್ದಾಣದಲ್ಲಿ ರಾಮಾಯಣ ಎಕ್ಸ್ಪ್ರೆಸ್ ನಿಲುಗಡೆ ಆಗಲಿದ್ದು ಅಲ್ಲಿಂದ ಪ್ರವಾಸಿಗರಿಗೆ ಇತಿಹಾಸ ಪ್ರಸಿದ್ಧ ಪ್ರದೇಶಗಳನ್ನು ಸಂದರ್ಶಿಸುವ ಅವಕಾಶ ಲಭಿಸಲಿದೆ.

ರಾಮಾಯಣದಲ್ಲಿ ಉಲ್ಲೇಖವಿರುವ ಭಾರತದ ಸ್ಥಳಗಳಷ್ಟೇ ಅಲ್ಲದೆ ವಿದೇಶದಲ್ಲಿರುವ ಸ್ಥಳಗಳಿಗೆ ತೆರಳಲು ಸಹ ವಿಶೇಷ ಪ್ಯಾಕೇಜ್ ನ ವ್ಯವಸ್ಥೆ ಇದ್ದು ರಾಮೇಶ್ವರದ ಬಳಿಕ ಶ್ರೀಲಂಕಾದಲ್ಲಿರುವ ಕೊಲಂಬೊ, ನೆಗೆಂಬೊ, ಕ್ಯಾಂಡಿ ಮತ್ತಿತರ ಸ್ಥಳಗಳನ್ನು ಸಂದರ್ಶನ ಮಾಡಲು ಪ್ರತ್ಯೇಕ ವೆಚ್ಚದಲ್ಲಿ ವಿಮಾನಯಾನದ ಪ್ಯಾಕೇಜ್ ವ್ಯವಸ್ಥೆ ಸಹ ಲಭಿಸಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ. ಒಟ್ಟಿನಲ್ಲಿ ಮೋದಿ ಸರ್ಕಾರ ನಮ್ಮ ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖಗೊಂಡಿರುವ ಸ್ಥಳಗಳನ್ನು ಮತ್ತೆ ಮುನ್ನೆಲೆಗೆ ತರಲು ಆರಂಭ ಮಾಡಿರುವ ಈ ಹೊಸ ರೈಲ್ವೇ ಯೋಜನೆಯು ರಾಮ ಭಕ್ತರಲ್ಲಿ ಸಂತೋಷವನ್ನು ಉಂಟು ಮಾಡಿದೆ.
ರೈಲ್ವೇ ಇಲಾಖೆಯ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಈ ರಾಮಾಯಣ ಎಕ್ಸ್ಪ್ರೆಸ್ ರೈಲಿನಲ್ಲಿ ಹಲವಾರು ಸವಲತ್ತುಗಳನ್ನು ನೀಡಲಾಗಿದ್ದು ಎಂಟನೂರು ಆಸನಗಳ ವ್ಯವಸ್ಥೆ ಇರುವ ವಿಶೇಷ ರೈಲು ಇದಾಗಿದೆ. ಹದಿನಾರು ದಿನಗಳ ಈ ರೈಲು ಪ್ರವಾಸ ಪ್ಯಾಕೇಜ್ ನ ಟಿಕೆಟ್ ದರ 15,120 ರೂಪಾಯಿಗಳು ಆಗಲಿದ್ದು ಇದರಲ್ಲಿ ಊಟ ಹಾಗೂ ವಸತಿ ವ್ಯವಸ್ಥೆಯೂ ಸೇರಲಿದೆ. ಶೀಘ್ರದಲ್ಲಿ ಇದರ ಬುಕ್ಕಿಂಗ್ ಅನ್ನು ತಮ್ಮ ಅಧಿಕೃತ ಐ.ಆರ್.ಸಿ.ಟಿ.ಸಿ
ಯ ಮೂಲಕ ಆರಂಭಿಸುವ ಬಗ್ಗೆ ರೈಲ್ವೆ ಇಲಾಖೆ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದೆ .

Leave a Reply

Your email address will not be published.