ಅನ್ನಭಾಗ್ಯ ಫಲಾನುಭವಿಗಳಿಗೆ ಸಿಹಿ ಸುದ್ದಿ, ಅಕ್ಕಿ ಕಡಿತ ರದ್ದು, ರೈರತ ಚಾಲ್ತಿ ಸಾಲಮನ್ನಾ – HDK

ರೈತರು ಮತ್ತು ಬಡವರಿಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಿಹಿ ಸುದ್ದಿ ನೀಡಿದ್ದಾರೆ.  1 ಲಕ್ಷದವರೆಗಿನ ಚಾಲ್ತಿ ಸಾಲಮನ್ನಾ ಘೋಷಣೆ ಮಾಡಿದ ಕುಮಾರಸ್ವಾಮಿ   ಅನ್ನಭಾಗ್ಯ ಅಕ್ಕಿ ಕಡಿತ ವನ್ನು ಹಿಂತೆಗೆದುಕೊಂಡಿದ್ದರೆ.


ರಾಜ್ಯದ ರೈತರಿಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಸುಸ್ತಿ ಸಾಲದ ಜತೆಗೆ ಚಾಲ್ತಿ ಸಾಲವೂ ಮನ್ನಾ ಮಾಡಲು ಘೋಷಣೆ ಮಾಡಿದ್ದಾರೆ.
ಬಜೆಟ್ ಮೇಲಿನ ಉತ್ತರ ನೀಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಹಕಾರ ಬ್ಯಾಂಕ್ ಗಳಲ್ಲಿ 10,700 ಕೋಟಿ ಚಾಲ್ತಿ ಸಾಲವಿದೆ. ಹೀಗಾಗಿ ರೈತರ 1 ಲಕ್ಷದವರೆಗಿನ ಚಾಲ್ತಿ ಸಾಲಮನ್ನಾ ಮಾಡಲು ನಿರ್ಧರಿಸಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ಸಹಾಕಾರಸಂಘದಲ್ಲಿನ ರೈತರು ಪಡೆದಿರುವ ಬೆಳೆ ಸಾಲಮನ್ನಾ ಮಾಡಲು ನಿರ್ಧರಿಸಿದ್ದಾರೆ.

ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನ 7 ಕೆಜಿ ಯಿಂದ 5 ಕೆಜಿ ಇಳಿಸಿದ್ದಕ್ಕೆ ವ್ಯಾಪಕ ಟೀಕೆ ಎದುರಾದ ಹಿನ್ನೆಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಕ್ಕಿ ಕಡಿತವನ್ನ ರದ್ದು ಮಾಡಿದ್ದಾರೆ. ಇದೀಗ ಹಿಂದಿನಂತೆ ಅನ್ನಭಾಗ್ಯ ಅಕ್ಕಿ 7 ಕೆಜಿ ನೀಡಲಾಗುತ್ತದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

Leave a Reply

Your email address will not be published.