Fashion magazine JW ಕವರ್ ಪೇಜ್’ನಲ್ಲಿ ಗರ್ಭಿಣಿ ಸಾನಿಯಾ ಮಿಂಚು !

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ, ಇದೀಗ ಖ್ಯಾತ ಫ್ಯಾಶನ್‌ ನಿಯತಕಾಲಿಕೆ ‘ಜೆಡಬ್ಲ್ಯು’ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಟೆನಿಸ್ ಲೋಕದಲ್ಲಿ ಮಿಂಚು ಹರಿಸಿರುವ ಹೈದರಾಬಾದ ಮೂಗುತಿ ಸುಂದರಿಯ ಸುತ್ತ ಯಾವಾಗಲು ವಿವಾದಗಳ ಹುತ್ತ ವಿರುತ್ತದೆ, ಆದರೆ ಈ ಬಾರಿ ಅವರು ಕೇವಲ ತಾಯ್ತನದ ಬಗ್ಗೆ ತಮ್ಮ ಪತಿ ಪಾಕಿಸ್ತಾನದ ಕ್ರಿಕೆಟರ ಶೋಯಬ್ ಮಲಿಕ್ & ತಮ್ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.


ತಾಯ್ತನ ವಿಚಾರದಡಿ ರೂಪಿಸಲಾಗಿರುವ ಈ ಮುಖಪುಟದಲ್ಲಿ ಅವರ ಫೋಟೋದೊಂದಿಗೆ, ‘ಗರ್ಭಿಣಿಯಾಗುವುದೆಂದರೆ ಅದು ಸ್ವಾತಂತ್ರ್ಯಕ್ಕೆ ಅಡ್ಡಿಯಾದಂತಲ್ಲ. ಅದು ಮಹಿಳೆ ಯರನ್ನು ಮತ್ತಷ್ಟು ಸಶಕ್ತೀಕರಣ ಗೊಳಿಸುತ್ತದೆ ಹಾಗೂ ಅವರಲ್ಲಿ ಸ್ಫೂರ್ತಿ ತುಂಬುತ್ತದೆ’ ಎಂಬ ಅವರ ಮಾತುಗಳನ್ನು ಉಲ್ಲೇಖೀಸಲಾಗಿದೆ. ಮೊದಲ ಬಾರಿ ತಾಯ್ತನದ ಖುಷಿಯನ್ನು ಎದಿರು ನೋಡುತ್ತಿರುವ ಸಾನಿಯಾ ಅದಕ್ಕಾಗಿ ತಾವು ಮಾಡಿಕೊಂಡಿರುವ ಸಿದ್ದತೆಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ಮುಖಪುಟ ಲೇಖನದಲ್ಲಿ ಸಾನಿಯಾ ಅವರ ಸಂದರ್ಶನದ ಸಾರಾಂಶ ನೀಡಲಾಗಿದ್ದು, ಇದರಲ್ಲಿ ತಾಯ್ತನದ ಬಗ್ಗೆ ಸಾನಿಯಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com