Film news : Rocking star ಹತ್ಯೆಗೆ ಸಂಚು ! ಸುಪಾರಿಕೊಟ್ಟವರ್ಯಾರು ಇಲ್ಲಿದೆ details….

2 ವರ್ಷಗಳ ಹಿಂದೆ ನಟ ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಶಾಕಿಂಗ್ ಸಂಗತಿ ಬೆಳಕಿಗೆ ಬಂದಿದೆ. ಹೌದು. ಜೂನ್ 27 ರಂದು ಸಿಸಿಬಿ ಪೊಲೀಸರ ಗುಂಡೇಟು ತಿಂದು ಬಂಧನಕ್ಕೊಳಗಾಗಿರುವ ಕುಖ್ಯಾತ ರೌಡಿ ಸೈಕಲ್ ರವಿ ವಿಚಾರಣೆ ವೇಳೆ ಈ ವಿಷಯವನ್ನು ಬಾಯ್ಬಿಟ್ಟಿದ್ದಾನೆ.

ಬೆಂಗಳೂರು ನಗರದ ಹೊರ ವಲಯದಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಯಶ್ ಹತ್ಯೆಯ ವಿಚಾರ ಪ್ರಸ್ತಾಪವಾಗಿತ್ತು. ಪಾರ್ಟಿ ಬಳಿಕ ಈ ಕುರಿತು ಸಂಚು ರೂಪಿಸಲು ಯಾರೂ ಮುಂದಾಗಿರಲಿಲ್ಲ. ಆದರೆ ಮತ್ತೊಬ್ಬ ರೌಡಿ ಕೋದಂಡ ಎಂಬಾತ ಈ ವಿಚಾರದಲ್ಲಿ ಆಸಕ್ತಿ ವಹಿಸಿದ್ದನೆಂದು ಹೇಳಲಾಗಿದೆ.

 

ಸೈಕಲ್ ರವಿ ಹಾಗೂ ಕೋದಂಡ ಪರಸ್ಪರ ವಿರೋಧಿಗಳಾಗಿದ್ದವರು ಈಗ ರಾಜಿ ಮಾಡಿಕೊಂಡು ಒಂದಾಗಿದ್ದಾರೆನ್ನಲಾಗಿದೆ. ಕೋದಂಡ ಪೊಲೀಸರ ಕೈಗೆ ಸಿಗದೆ ಇನ್ನೂ ಭೂಗತನಾಗಿದ್ದು, ಆತನ ಬಂಧನದ ಬಳಿಕ ಹತ್ಯೆ ಸಂಚಿನ ಕುರಿತು ಪೊಲೀಸರಿಗೆ ಹೆಚ್ಚಿನ ಮಾಹಿತಿ ಲಭಿಸುವ ಸಾಧ್ಯತೆಯಿದೆ. ಈ ವಿಷಯ ಸ್ಯಾಂಡಲ್ ವುಡ್ ನ್ನು ಬೆಚ್ಚಿ ಬೀಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಕಲ್ ರವಿಯ ಮೂವರು ಸಹಚರರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೇಕರಿ ಮೂರ್ತಿ , ಲಕ್ಷ್ಮಿ ನಾರಾಯಣ, ಹ್ಯಾಂಡಿ ನವೀನ ಮೂವರು ಬಂಧಿತ ಆರೋಪಿಗಳು. ಮೂವರು ಆರೋಪಿಗಳು ಸೈಕಲ್ ರವಿಯ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಸೈಕಲ್ ರವಿ ತನ್ನ ಕಾನೂನುಬಾಹಿರ ಚಟುವಟಿಕೆಗಳಿಗೆ ಬಂಧಿತ ಅರೋಪಿಗಳನ್ನು ಬಳಸಿಕೊಳ್ಳುತ್ತಿದ್ದ. ಈತನ ಸೂಚನೆ ಮೇರೆಗೆ ಕೆಲಸ ಹಣಕ್ಕಾಗಿ ಉದ್ಯಮಿಗಳನ್ನು ಅಪಹರಿಸಿ ವಿಕೃತವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಅಪಹರಿಸಿ, ಬಳಿಕ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕಬ್ಬಿಣದ ಮುಳ್ಳು ತಂತಿಯಿಂದ ಸುತ್ತಿ ಹೊಡೆಯುವುದು ಸೇರಿದಂತೆ ವಿಚಿತ್ರವಾಗಿ ಆರೋಪಿಗಳು ಹಿಂಸೆ ಕೊಡುತ್ತಿದ್ದರು.

Leave a Reply

Your email address will not be published.