J&K : ಬಿಜೆಪಿಗೆ ಖಡಕ್ ಎಚ್ಚರಿಕೆ ನೀಡಿದ ಮಾಜಿ ಸಿಎಂ ಮೆಹಬೂಬಾ ಮುಫ್ತಿ..!

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗು ಪೀಪಲ್ ಡೆಮೊಕ್ರಟಿಕ್ ಪಾರ್ಟಿ (ಪಿಡಿಪಿ) ಜೊತೆಗಿನ ಮೈತ್ರಿ ಮುರಿದುಕೊಂಡ ನಂತರ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ‘ಮೆಹಬೂಬ ಮುಫ್ತಿ’ ಅವರು ರಾಜಿನಾಮೆ ನೀಡಿದ್ದರು.

ಕಾಶ್ಮೀರದ ಕೆಲ ರಾಜಕಾರಣಿಗಳ ಹೇಳಿಕೆಗಳು ಹೇಗಿರುತ್ತವೆ ಅಂದರೆ ಕೆಲ ಸಮಯ ಅವರು ತಾವು ಭಾರತೀಯರು ಅನ್ನುವುದನ್ನೇ ಮರೆತಂತಿರುತ್ತದೆ‌. ಎರಡು ದಿನಗಳ ಹಿಂದೆ ಷರಿಯಾ ಕಾನೂನಿನ ಬಗ್ಗೆ ಮಾತನಾಡಿದ್ದ ಜಮ್ಮು ಕಾಶ್ಮೀರದ ಗ್ರ್ಯಾಂಡ್ ಮುಫ್ತಿ ‘ನಸೀರ್ ಉಲ್ ಇಸ್ಲಾಂ’ ರವರು ಭಾರತೀಯ ಜನತಾ ಪಕ್ಷವು ಈ ಕಾನೂನಿಗೆ ಒಪ್ಪದಿದ್ದಲ್ಲಿ ಪ್ರತ್ಯೇಕ ದೇಶ ಕೇಳಬೇಕಾಗುತ್ತದೆ ಎಂಬ ಹೇಳಿಕೆಗಳನ್ನು ನೀಡಿ ದೇಶದಾದ್ಯಂತ ತಲ್ಲಣ ಮೂಡಿಸಿದ್ದರು‌. ಈಗ ಅದಾದ ಒಂದೇ ದಿನದ ಬಳಿಕ ಜಮ್ಮು ಕಾಶ್ಮೀರದ ಮಾಜೀ ಮುಖ್ಯಮಂತ್ರಿ ಮೆಹಬೂಬ ಮುಫ್ತಿರವರು, ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಮೂಲಕ ವಿವಾದಾತ್ಮಕ ಹೇಳಿಕೆಯನ್ನು ಮೆಹಬೂಬಾ ಮುಫ್ತಿರವರು ಕೊಟ್ಟಿದ್ದಾರೆ.

ಕಣಿವೆ ರಾಜ್ಯದಲ್ಲಿ ಮಧ್ಯಪ್ರವೇಶಿಸಲು ಯತ್ನಿಸಿದರೆ, ಮತ್ತಷ್ಟು ಪ್ರತ್ಯೇಕತಾವಾದಿಗಳು ಹುಟ್ಟಿಕೊಳ್ಳುತ್ತಾರೆ ಎಂದು ಭಾರತೀಯ ಜನತಾ ಪಕ್ಷಕ್ಕೆ ಮುಪ್ತಿ ಎಚ್ಚರಿಕೆ ಕೊಟ್ಟಿದ್ದು, 1987ರ ಘಟನೆಯನ್ನು ಮರೆಯದಿರಿ ಎಂದು ಭಾರತೀಯ ಜನತಾ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಕಾಶ್ಮೀರಿ ಜನರ ಹಕ್ಕುಗಳನ್ನು ಕಸಿಯಲು ಕೇಂದ್ರ ಸರ್ಕಾರ ಪ್ರಯತ್ನಿಸಿದರೆ, ಸಲಾಹುದ್ದೀನ್ ಮತ್ತು ಯಾಸೀನ್​ ಮಲ್ಲಿಕ್​ ರಂತಹ ಹಲವು ಪ್ರತ್ಯೇಕತಾವಾದಿಗಳು ಹುಟ್ಟಿಕೊಳ್ತಾರೆ. ಪಿಡಿಪಿಯನ್ನು ತುಳಿಯಲು ಮುಂದಾದರೆ, ಇದರ ಪರಿಣಾಮ ಬಹಳ ಅಪಾಯಕಾರಿ ಆಗಿರುತ್ತೆ ಎಂದು ಹೇಳಿಕೆ ನೀಡುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಇನ್ನು ಕುಟುಂಬ ರಾಜಕಾರಣ ಹಾಗು ರಾಜಕೀಯ ಅಸ್ಥಿರತೆಯಿಂದಾಗಿ ಜಮ್ಮು ಕಾಶ್ಮೀರದ ಪಿಡಿಪಿ ನಾಯಕಿ ಹಾಗು ಅಲ್ಲಿನ ಮಾಜೀ ಮುಖ್ಯಮಂತ್ರಿ ಮೆಹಬೂಬ ಮುಫ್ತಿರವರ ರಾಜಕೀಯ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದ್ದು, ಅವರ ವಿರುದ್ಧ ತಮ್ಮದೇ ಪಕ್ಷದ ನಾಯಕರು ಬಹಿರಂಗ ಹೇಳಿಕೆ ನೀಡಿ ಅವರ ಮೇಲಿನ ತಮ್ಮ ಅಸಮಾಧಾನವನ್ನು ಹೊರಹಾಕಲಾಗುತಿದ್ದು ಇದು ಎಲ್ಲಿಗೆ ತಲುಪುವುದು ಎಂದು ನೋಡಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com