HDK ಸುಳ್ಳಿನ ಬಜೆಟ್ ಮಂಡಿಸಿ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದ್ದಾರೆ : ಶೋಭಾ ಕರಂದ್ಲಾಜೆ

‘ ಸಿಎಂ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಸುಳ್ಳಿನ‌ ಬಜೆಟ್. ಈ ರೀತಿಯ ಬಜೆಟ್ ಮಂಡಿಸುವ ಮೂಲಕ ಸಿಎಂ ಜನರ ಹಾಗೂ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸಮಾಡಿದ್ದಾರೆ ‘ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಿಎಂ ವಿರುದ್ಧ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಬಜೆಟ್ ನಲ್ಲಿ ಸಿ ಎಂ ಸಾಲಮನ್ನಾ ಘೋಷಣೆ ಮಾಡಿದ್ದು ಎಷ್ಟು ಸಾಲ ಮನ್ನಾ ಆಗುತ್ತೆ ಎಂಬ ಸ್ಪಷ್ಟತೆ ಇಲ್ಲ ಹಾಗಾಗಿ ಸಿಎಂ ವಿದಾನಸೌಧದಲ್ಲಿ ಸುಳ್ಳು ಹೇಳಿದ್ದಾರೆ ‘ ಎಂದರು.

‘ ಇನ್ನು ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ಕೈ ತಪ್ಪುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ನನಗೆ ಪಕ್ಷ ಯಾವ ಜವಾಬ್ದಾರಿ ಕೊಟ್ಟರು ನಿರ್ವಹಿಸುತ್ತೇನೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದರು ನಾನು ರೆಡಿ. ಚುನಾವಣೆಗೆ ಸ್ಪರ್ಧೆ ಮಾಡಿ ಎಂದರೆ ಅದಕ್ಕೂ ರೆಡಿ. ರಾಷ್ಟ್ರದ ನಾಯಕತ್ವ, ರಾಜ್ಯದ ನಾಯಕತ್ವ ಯಾವುದು ಕೊಟ್ಟರು ನಿಭಾಯಿಸುತ್ತೇನೆ ‘ ಎಂದು ಪ್ರತಿಕ್ರಿಯಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com