ಮೋದಿ ರೈತರನ್ನು ಕಡೆಗಣಿಸಿ ಕಾರ್ಪೊರೇಟ್ ವಲಯದ ಹಿತ ಕಾಪಾಡಿದ್ದಾರೆ : ಮಲ್ಲಿಕಾರ್ಜುನ ಖರ್ಗೆ

ಯಾದಗಿರಿ : ಯಾದಗಿರಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ‘ ಲೋಕಸಭಾ ಚುನಾವಣಾ ಸಮೀಪಿಸಿದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈಗ ರೈತರ ನೆನಪಾಗಿದೆ. ದೇಶದಲ್ಲಿ ಎಷ್ಟೆ ರ್ಯಾಲಿ ಮಾಡಿದರು, ರ್ಯಾಲಿ ಫಲ ನೀಡಲ್ಲ ‘ ಎಂದಿದ್ದಾರೆ.

‘ ರೈತರ ಸಾಲ ಮನ್ನಾ ಮಾಡಿ ರೈತರ ಪರ ಕಾಳಜಿ ವಹಿಸಬೇಕಿತ್ತು. ಆದ್ರೆ ಪ್ರಧಾನಿ ಕಾರ್ಪೊರೇಟ್ ವಲಯದ ಹಿತ ಕಾಪಾಡಿದ್ದು ಅವರು ರೈತನ ಮಗನಲ್ಲ ಕಾರ್ಪೊರೇಟ್ ಮಗ ಆಗಿದ್ದಾರೆ, ರೈತರ ಸಾಲ ನನ್ನಾ ಮಾಡದೇ ರೈತರ ಬೆಳೆಗೆ ಬೆಂಬಲ ಬೆಲೆ ಘೋಷಣೆ ಚುನಾವಣಾ ಗಿಮೀಕ್ ಆಗಿದೆ ‘ ಎಂದು ಹೇಳಿದ್ದಾರೆ.

‘ ರಾಜ್ಯದಲ್ಲಿ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ವಿಚಾರ ಕಾಂಗ್ರೆಸ್ ಹೈಕಮಾಂಡಗೆ ಬಿಟ್ಟದ್ದು ‘ ಎಂದು ಯಾದಗಿರಿಯ ಬಸವೇಶ್ವರ ಗಂಜ್ ಪ್ರದೇಶದ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ನಂತರ ಸುದ್ದಿಗಾರರಿಗೆ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com