Drugs : ಸರ್ಕಾರಿ ಶಾಲೆಗಳಲ್ಲಿ ಅಲ್ಲ, ಪ್ರತಿಷ್ಟಿತ ಶಾಲಾ ಕಾಲೇಜುಗಳಲ್ಲೇ ಹೆಚ್ಚು- ರಮೇಶ್ ಕುಮಾರ್…

ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಡ್ರಗ್ಸ್ ವ್ಯಸನಿಗಳಾಗುವುದು ಕಡಿಮೆ, ಪ್ರತಿಷ್ಟಿತ ಶಾಲೆಗಳಲ್ಲಿ ವ್ಯಾಸಾಂಗ ಮಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಾ್ತಿದ್ದಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.


ವಿಧಾನಸಭೆಯಲ್ಲಿ ಇಂದು ಡ್ರಗ್ಸ್ ಹಾವಳಿ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಸರ್ಕಾರಿ ಶಾಲಾ ಮಕ್ಕಳು ಮತ್ತು ಗ್ರಾಮೀಣ ಪ್ರದೇಶದವರು ಡ್ರಗ್ಸ್ ಹಾವಳಿಗೆ ಬಲಿಯಾಗಲ್ಲ. ಪ್ರತಿಷ್ಠಿತರ ಮಕ್ಕಳು ಡ್ರಗ್ಸ್ ಗೆ ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಂತಿನಗರದ ಸುತ್ತ ಮುತ್ತ ಹೆಚ್ಚು: ಬೆಂಗಳೂರು ಉಡ್ತಾ ಪಂಜಾಬ್ ಆಗುವತ್ತ..

ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡಿದ ಶಾಸಕ ಆರ್.ಅಶೋಕ್, ಡ್ರಗ್ಸ್ ಹಾವಳಿ ಶಾಂತಿನಗರದ ಸುತ್ತ ಮುತ್ತ ಹೆಚ್ಚಾಗಿದೆ. ಬೆಂಗಳೂರು ಉಡ್ತಾಪಂಜಾಬ್ ಆಗುವತ್ತ ಸಾಗಿದೆ. ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಪ್ಪ ಅಮ್ಮನ ಬಿಟ್ಟಿ ದುಡ್ಡು ಪಡೆಯೋರು ಹೆಚ್ಚಾಗಿ ಡ್ರಗ್ಸ್ ಗೆ ಬಲಿಯಾಗುತ್ತಿದ್ದಾರೆ. 14 ರಿಂದ 30 ವರ್ಷದವರೇ ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ರೈತರು ಗಾಂಜಾ ಬೆಳೆಯಲ್ಲ. ಆದರೆ ಯಾರು ಮರ್ಯಾದೆಗೆ ಹೆದರಲ್ಲ ಅಂಜಲ್ಲ ಅಂಥವರು ಗಾಂಜಾ ಬೆಳೆಯುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com