ಚಿಕ್ಕಬಳ್ಳಾಪುರ : ಸಿಗರೇಟ್ ಇಲ್ಲ ಅಂದಿದಕ್ಕೆ ಅಂಗಡಿ ಮಾಲಕಿಗೆ ಚಾಕು ಇರಿದ ವ್ಯಕ್ತಿ..!

ಚಿಕ್ಕಬಳ್ಳಾಪುರ: ಸಿಗರೇಟ್ ಇಲ್ಲ ಅಂದ ಅಂಗಡಿ ಮಾಲಕಿಗೆ ವ್ಯಕ್ತಿಯೊಬ್ಬ ಚಾಕು ಇರಿದಿರುವ ಘಟನೆ ಚಿಕ್ಕಬಳ್ಳಾಪುರ ಗುಡಿಬಂಡೆ ತಾಲೂಕಿನ ಜೀಗಾನಹಳ್ಳಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಹಿಳೆ ಅಂಗಡಿ ಮಾಲಕಿ ರತ್ನಮ್ಮ (45) ಗಂಭೀರವಾಗಿ ಗಾಯಗೊಂಡಿದ್ದಾರೆ.

ಗ್ರಾಮದ ಲಕ್ಷ್ಮಿನಾರಾಯಣ ಎಂಬಾತ ಈ ಕೃತ್ಯ ಎಸಗಿದ್ದು, ಸಿಗರೇಟ್ ಖರೀದಿಸಲು ಬಂದು ಮಹಿಳೆಯೂಂದಿಗೆ ಜಗಳವಾಡಿದ್ದಾನೆ. ಸಿಗರೇಟ್ ಇಲ್ಲ ಅಂದಿದಕ್ಕೆ ಮಹಿಳೆಗೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಮಹಿಳೆ ಗುಡಿಬಂಡೆ ತಾಲೂಕು ಆಸ್ಪತ್ರೆಗೆ ದಾಖಲಲು ಮಾಡಲಾಗಿದೆ. ಗುಡಿಬಂಡೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.