ಚಾಮರಾಜನಗರ : ರೈಲ್ವೆ ಮೇಲ್ಸೇತುವೆಗೆ ಬೈಕ್ ಡಿಕ್ಕಿ : ಸವಾರ ಸ್ಥಳದಲ್ಲೇ ಸಾವು…

ಚಾಮರಾಜನಗರ : ರೈಲ್ವೆ ಮೇಲ್ಸೇತುವೆಗೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ರೈಲ್ವೆ ಮೇಲು ಸೇತುವೆ ಬಳಿ ನಡೆದಿದೆ. ಚಾಮರಾಜನಗರ ತಾಲೂಕಿನ ಕೊಣನೂರು ಪಾಳ್ಯದ ರಮೇಶ್ (25) ಮೃತ ದುರ್ದೈವಿಯಾಗಿದ್ದಾರೆ.

ಮೇಲು ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು 30 ಅಡಿ ಎತ್ತರದ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ರಮೇಶ್ ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಸಹೋದರಿಯ ನ್ನು ಬಸ್ ಗೆ ಹತ್ತಿಸಿ ಬೈಕ್ ನಲ್ಲಿ ಚಾಮರಾಜನಗರದಿಂದ ಕೋಣನೂರು ಪಾಳ್ಯಗೆ ಹೋಗು‌ವಾಗ ಘಟನೆ ನಡೆದಿದೆ. ಮಳೆಯ ಅವಾಂತರದಿಂದ ಬೈಕ್ ಸವಾರ ಮೇಲ್ಸೇತುವೆಯಿಂದ ಬಿದ್ದಿದ್ದಾನೆ. ಚಾಮರಾಜನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com