ಚುನಾವಣೆ ವರ್ಷ 2019ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ದೊಡ್ಡಣ್ಣ..

2019ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ. ಚುನಾವಣೆ ವರ್ಷ ವಾಗಿರುವದರಿಂದ ಸಹಜವಾಗಿ ಮೋದಿ ಮತ್ತು ಅವರ ಪಕ್ಷ ಇಮೇಜ ಹೆಚ್ಚಿಸಿಕೊಳ್ಳಲು ಮುಂದಾಗಿದೆ…


ಕೇಂದ್ರ ಸರ್ಕಾರವು ಡೊನಾಲ್ಡ್ ಟ್ರಂಪ್ ಅವರನ್ನು ಈ ವರ್ಷದ ಏಪ್ರಿಲ್’ನಲ್ಲಿಯೇ ಆಹ್ವಾನಿಸಿದ್ದು, ಈ ಬಗ್ಗೆ ಅಮೆರಿಕಾದಿಂದ ಯಾವುದೇ ಉತ್ತರ ಬಂದಿಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಹೆಚ್ 1 ವಿಸಾ, ಆಮದು ತೆರಿಗೆ ಹೆಚ್ಚಳ, 2 + 2 ಮಾತುಕತೆ ಮುಂದೂಡಿಕೆ ಸೇರಿದಂತೆ ಹಲವು ವಿವಾದಗಳಿದ್ದರೂ ಟ್ರಂಪ್ ಅವರನ್ನು ಭಾರತಕ್ಕೆ ಆಹ್ವಾನಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.


2015ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮುಖ್ಯಅತಿಥಿಯಾಗಿ ಆಗಮಿಸಿದ್ದರು. ನಂತರ 2016ರಲ್ಲಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್, 2017ರಲ್ಲಿ ಅಬುಧಾಬಿ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಹಾಗೂ 2018ರಲ್ಲಿ ಆಸಿಯಾನ್ ದೇಶದ ನಾಯಕರು ಗಣ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com