WATCH : ವಿಷಪೂರಿತ ಹಾವನ್ನು ಹಿಡಿದ ಗುಜರಾತ್ ಕಾಂಗ್ರೆಸ್ MLA.. ವಿಡಿಯೋ ವೈರಲ್

ಸಾಮಾನ್ಯವಾಗಿ ಜನವಸತಿ ಪ್ರದೇಶಗಳಲ್ಲಿ ಹಾವು ಕಾಣಿಸಿಕೊಂಡರೆ, ಉರಗ ತಜ್ಞರು ಅವುಗಳನ್ನು ಹಿಡಿದು ಅರಣ್ಯ ಪ್ರದೇಶಗಳಿಗೆ ಒಯ್ದು ಸುರಕ್ಷಿತವಾಗಿ ಬಿಟ್ಟು ಬರುತ್ತಾರೆ. ಆದರೆ ಗುಜರಾತ್ ನಲ್ಲಿ ಶಾಸಕರೊಬ್ಬರು ವಿಷಪೂರಿತ ಹಾವನ್ನು ಹಿಡಿದು ಸುದ್ದಿಯಾಗಿದ್ದಾರೆ.

ಗುಜರಾತ್ ರಾಜ್ಯದ ಅಮ್ರೇಲಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪರೇಶ್ ಧನಾನಿ, ರಾಜಧಾನಿ ಗಾಂಧಿನಗರದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ವಿಷಪೂರಿತ ಹಾವೊಂದನ್ನು ಹಿಡಿದಿದ್ದಾರೆ. ಶಾಸಕರು ಹಾವು ಹಿಡಿಯುತ್ತಿರುವ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು, ಸ್ವತಃ ಶಾಸಕರೇ ಟ್ವಿಟರ್ ಹಾಗೂ ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಶಾಸಕರು ಬರಿಗೈಯಲ್ಲಿ ಹಿಡಿದು ನಿಯಂತ್ರಿಸಲು ಯತ್ನಿಸುತ್ತಿರುವ 35 ಸೆಕೆಂಡುಗಳ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com