ಕಲಬುರ್ಗಿ : ತ್ರಿಬಲ್ ಮರ್ಡರ್ ಆರೋಪಿಯ ಕಾಲಿಗೆ ಪೋಲೀಸರಿಂದ ಗುಂಡೇಟು..

ಕಲಬುರಗಿಯ ಸೇಡಂ ರಸ್ತೆಯಲ್ಲಿರುವ ಬುದ್ದ ವಿಹಾರದ ಬಳಿ ಪೊಲೀಸರಿಂದ ಹಂತಕನ ಮೇಲೆ ಫೈರಿಂಗ್ ನಡೆದಿದೆ. ತ್ರಿಬಲ್ ಮರ್ಡರ್ ಆರೋಪಿ ಮಹ್ಮದ್ ಮುಸ್ತಾಫಾ ಮೇಲೆ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದು ಗಾಯಗೊಂಡ ಹಂತಕನನ್ನು ಕಲಬುರ್ಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಹ್ಮದ್ ಮುಸ್ತಫಾ, ಕಲಬುರ್ಗಿಯ ಜಿಲಾನಾಬಾದ ನಲ್ಲಿರುವ ಸಂಬಂಧಿಕರ ಮನೆಗೆ ಬೆಂಕಿ ಹಚ್ಚಿ ಮಲಗಿದ್ದವರನ್ನು ಸುಟ್ಟು ಹಾಕಿದ್ದ. ಸಂಬಂಧಿಕರನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಮುಸ್ತಾಫಾಗೆ ಹಿಡಿಯಲು ಪೊಲೀಸ್ ರು ಹೈದರಾಬಾದ್ ಗೆ ತೆರಳಿದ್ದರು. ಅಲ್ಲಿಯೂ ಪೊಲೀಸ್ ರ ಮೇಲೆಯೇ ಹಲ್ಲೆಗೈದು ಪರಾರಿಯಾಗಿದ್ದು ಇಂದು ಹಂತಕ ಸೇಡಂ ರಸ್ತೆಯಲ್ಲಿ ಅಡಗಿ ಕುಳಿತ್ತಿದ್ದಾನೆ ಎನ್ನುವ ಮಾಹಿತಿ ಹಿನ್ನಲೆ ಪೊಲೀಸ್ ರು ಬಂಧಿಸಲು ಹೋದಾಗ ಪೊಲೀಸ್ ರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದಾನೆ.

ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೂ ಗಾಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಆರೋಪಿಯನ್ನು ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಮುವ್ವರು ಪೇದೆಗಳಾದ ಸದರ ಪಟೇಲ್, ಸಲೀಂ ಮತ್ತು ಶಿವಲಿಂಗಗೆ ಗಾಯಗಳಾಗಿವೆ. ಸ್ಥಳಕ್ಕೆ ಎಸ್ಪಿ ಎನ್ ಶಶೀಕುಮಾರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published.