ಚಾಮರಾಜನಗರ : ಪ್ರೀತಿಗೆ ಪೋಷಕರ ವಿರೋಧ : ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು..!

ಪ್ರೀತಿಗೆ ವಿರೋಧಿಸಿದ ಪೋಷಕರಿಗೆ ಪಾಠ ಕಲಿಸಲು ಮುಂದಾದ ಪ್ರೇಮಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಕುಂತೂರು ಗ್ರಾಮದ ಶಂಬುಲಿಂಗೇಶ್ವರ ಬೆಟ್ಟದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮು ಳ್ಳೂರು ಗ್ರಾಮದ ಗಂಗಾಧರ ಮೂರ್ತಿಯವರ ಪುತ್ರ 20 ವ ರ್ಷದ ರೋಹಿತ್ ಮತ್ತು ಅದೇ ಗ್ರಾಮದ ಪ್ರಕಾಶ್ ಮೂರ್ತಿಯ ವರ ಪುತ್ರಿ 17 ವರ್ಷದ ಪ್ರಕೃತಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗ ಳು. ಪ್ರಕೃತಿ ದ್ವಿತೀಯ ಪಿಯುಸಿ ಓದುತ್ತಿದ್ದರೇ, ರೋಹಿತ್ ಪಿಯು ಸಿ ಮುಗಿಸಿ ಬೆಂಗಳೂರಿನ ಖಾಸ ಗಿ ಕಂಪನಿಯಲ್ಲಿ ಕೆಲಸ ಮಾಡು ತ್ತಿದ್ದನೆಂದು ತಿಳಿದು ಬಂದಿದೆ.

ಇಂದು ಸಂಜೆ ಕುಂತೂರು ಬೆಟ್ಟ ಕ್ಕೆ ತೆರಳಿದ ಪ್ರೇಮಿಗಳು ತಂಪು ಪಾನಿಯಕ್ಕೆ ಕೀಟನಾಶಕ ಒಂದ ನ್ನ ಬೆರಸಿ ಇಬ್ಬರು ಒಟ್ಟಿಗೆ ಕುಡಿದ್ದಿದ್ದರ ಪರಿಣಾಮ ಸ್ಥಳದ ಲ್ಲೇ ಸಾವಿಗೀಡಾಗಿದ್ದಾರೆ. ಮುಳ್ಳೂರು ಗ್ರಾಮದ ಅಕ್ಕ ಪಕ್ಕದ ಮನೆಯವರೇ ಆದ ಪ್ರೇಮಿಗಳ ಮದುವೆಗೆ ಪೋ ಷಕರು ವಿರೋಧ ವ್ಯಕ್ತ ಪಡಿಸಿ ದ್ದರ ಹಿನ್ನಲೆಯಲ್ಲಿ ಇಂದು ಸಂಜೆ ಕುಂತೂರು ಬೆಟ್ಟಕ್ಕೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿ ದ್ದಾರೆ.

ಇವರಿಬ್ಬರ ಪ್ರೀತಿಗೆ ವಿ ರೋಧ ವ್ಯಕ್ತಪಡಿಸಿದ್ದ ಎರಡು ಮನೆಯ ಪೋಷಕರು ಪರಸ್ಪರ ಜಗಳವಾಡಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಇಬ್ಬರ ಮದುವೆ ಸಾಧ್ಯವಿಲ್ಲವೆಂದು ಕಂಡು ಬಂದಿದ್ದರಿಂದ ಆತ್ಮ ಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com