‘ಬೇಟಿ ಬಚಾವೋ, ಬೇಟಿ ಪಡಾವೋ’ ಅತಿ ದೊಡ್ಡ ಸುಳ್ಳು : ಮೋದಿ ಘೋಷಣೆಗೆ ಕೆ. ಸುಧಾಕರ್ ಟಾಂಗ್

ಚಿಕ್ಕಬಳ್ಳಾಪುರ : ‘ಬೇಟಿ ಪಡಾವೋ.ಬೇಟಿ ಬಚಾವೋ ಅತಿ ದೊಡ್ಡ ಸುಳ್ಳು ‘ ಮೋದಿ ಘೋಷಣೆಗೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ ಸುಧಾಕರ್ ಟಾಂಗ್ ಕೊಟ್ಟಿದ್ದಾರೆ. ಅಂಕಿಅಂಶಗಳ ಸಮೇತ ಮೋದಿ ಸರ್ಕಾರದ ಕಾರ್ಯಕ್ರಮ ಲೇವಡಿ ಮಾಡಿದ್ದಾರೆ.

‘ ಮಧ್ಯಪ್ರದೇಶ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ರಾಜ್ಯವಾಗಿದೆ. ಕಳೆದ ವರ್ಷ 4744 ಅತ್ಯಾಚಾರ ಪ್ರಕರಣಗಳು ಮಹಾರಾಷ್ಟ್ರದಲ್ಲಿ ನಡೆದಿದೆ. 2552 ಅಪ್ರಾಪ್ತರ ಮೇಲೆ ಅತ್ಯಾಚಾರವಾಗಿರೊದು ಶೋಚನೀಯ ವಿಷಯ, ಅತ್ಯಂತ ದುಃಖ ಪಡುವ ಸತ್ಯವಾಗಿದೆ ‘ ಎಂದು ಟ್ವೀಟ್ ಮಾಡುವ ಮೂಲಕ ಮೋದಿಯ ಕಾರ್ಯಕ್ರಮಗಳು ಕೇವಲ ಸುಳ್ಳಿನ ಸರಮಾಲೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಾಸಕ ಡಾ.ಕೆ ಸುಧಾಕರ್ ಟ್ವೀಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com