ನಾನು ಹುಟ್ಟು ಕಾಂಗ್ರೆಸಿಗ, ನನ್ನ ಡೆಡ್ ಬಾಡಿ ಕೂಡ ಬಿಜೆಪಿಗೆ ಹೋಗಲ್ಲ : ಎಚ್.ಸಿ ಮಹದೇವಪ್ಪ

ಮೈಸೂರಿನ ಶ್ರೀರಾಂಪುರ ದಲ್ಲಿರುವ ಧನ್ವಂತರಿ ಆಸ್ಪತ್ರೆಯ ಹತ್ತಿರ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ರವರು ಮಾದ್ಯಮದವರ ಜೊತೆಗೆ ಮಾತನ್ನಾಡಿ ವಿಧಾನಸಭಾ ಚುನಾವಣೆಯ ಸೋಲಿನಿಂದ ದಿಗ್ಭ್ರಾಂತನಾಗಿದ್ದೆ. ನಮ್ಮ ಸರ್ಕಾರದ ಸೋಲಿಗೆ ಜಾತಿ ವಾದಿಗಳೆ ಕಾರಣ. ಒಂದೇ ಒಂದು ಸ್ಕ್ಯಾಂಡಲ್ ಇಲ್ಲದೆ ಸರ್ಕಾರವನ್ನ ನಡೆಸಿದ ಹೆಗ್ಗಳಿಕೆ ಕಾಂಗ್ರೆಸ್ ನದ್ದು. ಚುನಾವಣೆ ನಡೆದಿದೆ ಫಲಿತಾಂಶ ಹೊರಬಿದ್ದಿದೆ.ಫಲಿತಾಂಶದಿಂದ ದಿಗ್ಬ್ರಮೆಯಾಗಿದ್ದೇನೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸ್ಥಿರ ಅಭಿವೃದ್ದಿ ಸರ್ಕಾರವನ್ನ ರಾಜ್ಯಕ್ಕೆ ನೀಡಿದ್ದೇವು.

ಸಂವಿಧಾನ ಬಯಸಿದ ತುಳಿತಕ್ಕೆ ಒಳಗಾದವರನ್ನ ಮೆಲೇತ್ತಿ ಸರ್ವಾಂಗಿಣ ಆಡಳಿತ ಕೊಟ್ಟಿದ್ದೆವು. ಚುನಾವಣೆಗೆ ಹೋದಂತ ಸಮಯದಲ್ಲಿ ಸಮೀಕ್ಷೆ ಬೇರೆ ಇತ್ತು. ಆದ್ರೆ ಅದು ಉಲ್ಟಾ ಆಯ್ತು.ಕಾಂಗ್ರೆಸ್ ನಲ್ಲಿ ಎಲ್ಲೂ ಕೂಡ ಆಡಳಿತ ವಿರೋಧಿ ನಡೆ ಇರಲಿಲ್ಲ. ಕಂಡಿತವಾಗಿ ೧೨೦ ಸ್ಥಾನವನ್ನ ಗೆಲ್ಲುವ ಭರವಸೆ ನಮಗೆ ಇತ್ತು.ಚುನಾವಣೆಯ ನಾಲ್ಕು ದಿನಗಳ ಮುನ್ನ ಎಲ್ಲ ಬುಡಮೇಲಾಗಿದ್ದು ಬೇಜಾರಾಗಿದೆ.ನಾನಂತು ಇದರಿಂದ ತುಂಬಾ ಬೇಜಾರ್ ಆಗಿದ್ದೇ.ಅಭಿವೃಧ್ದಿಯನ್ನ ನೋಡಿಯೂ ಕೂಡ ಜನ ಬೆಂಬಲ ಕೊಟ್ಟಿಲ್ಲ. ಅಭಿವೃದ್ದಿ ಮಾಡಲು ಬರುವ ಶಾಸಕರ ಸಂಖ್ಯೆ ವಿಧಾನಸೌಧಕ್ಕೆ ಬರೋದು ಕಡಿಮೆ ಆಗುತ್ತೆ ಎಂದರು.

Image result for ಎಚ್ ಸಿ ಮಹದೇವಪ್ಪ

ಇನ್ನೂ ಬಿಜೆಪಿ ಸೇರ್ಪಡೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ ನನ್ನ ಮೃತ ದೇಹ ಕೂಡ ಬಿಜೆಪಿಗೆ ಹೋಗಲ್ಲ. ನಾನು ಹುಟ್ಟು ಕಾಂಗ್ರೆಸಿಗ,ಕಾಂಗ್ರೆಸ್ ನಲ್ಲೆ ಇರುತ್ತೇನೆ. ಯಾರೋ ಹೇಳಿದ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಇನ್ನಷ್ಟು ಕಾಂಗ್ರೆಸ್ ಪಕ್ಷವನ್ನ ಸಂಘಟನೆ ಮಾಡಿ ಭದ್ರ ಪಡಿಸುತ್ತೇನೆ.ನನ್ನನ್ನ ಪಕ್ಷದಿಂದ ಹೊರಹಾಕಿ‌ ಅವರು ಅಧಿಕಾರ ಅನುಭವಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ.ಈಗಲೂ ಕಾಂಗ್ರೆಸ್ ನಲ್ಲಿ ಇದ್ದೇನೆ ಕಾಂಗ್ರೆಸ್ ನಲ್ಲೆ‌ ನನ್ನ ರಾಜಕೀಯ ಕೊನೆಯಾಗೋದು ‘ ಎಂದಿದ್ದಾರೆ.

ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಸಂಬಂಧ ಹಳಸಿದೆ ಎಂಬ ಪ್ಲಾಂಟೆಡ್ ಸುದ್ದಿ ಹರಿಬಿಟ್ಟಿದ್ದಾರೆ.ನಮ್ಮ ಸಂಬಂಧ ಹಳಸಿದೆ ಎಂದು ನಾನಾಗಲಿ ಸಿದ್ದರಾಮಯ್ಯ ಆಗಲಿ ಹೇಳಿದ್ದೀವಾ?ನನಗೆ ನನ್ನ ಸೋಲಿಗಿಂತಲು ಪಕ್ಷದ ಸೋಲು ಹೆಚ್ಚು ಆಗಾತವಾಗಿದೆ.
ಯಾವುದೇ ಜಾತಿ ನೋಡದೆ ಅಭಿವೃದ್ಧಿ ಮಾಡಿದ್ದ ಸರ್ಕಾರವನ್ನ ಕಡೆಗಣಿಸಿದ್ದಾರೆ. ಚುನಾವಣೆಯ ಸೋಲಿನಿಂದ ಬೇಜಾರ್ ಆಗಿದ್ದಂತು ನಿಜ. ಪಕ್ಷದ ಸೋಲಿನಿಂದ ದಿಗ್ಭ್ರಾಂತನಾಗಿದ್ದೆ. ಚುನಾವಣೆಯಲ್ಲಿ ತುಂಬಾ ಓಡಾಡಿದ್ದರಿಂದ ಆರೋಗ್ಯ ಏರುಪೇರಾಗಿತ್ತು, ಅದಕ್ಕೆ ಪ್ರಕೃತಿ ಚಿಕಿತ್ಸಾಲಯದಲ್ಲಿದ್ದೇ ಅಷ್ಟೆ. ಆದ್ದರಿಂದ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಲಿಲ್ಲ. ಅದಕ್ಕೆ ಬೇರೆಯವರು ಇಲ್ಲಸಲ್ಲದನ್ನ ಕಲ್ಪನೆ ಮಾಡಿಕೊಂಡು ಮಾತನಾಡುತಿದ್ದಾರೆ.ಜಾತಿಗಳ ಸಮೀಕರಣ ಆಯ್ತು ಜಾತಿಗಳು ಅಭಿವೃದ್ದಿಯತ್ತ ಹೋದಾಗ ಅಭಿವೃದ್ದಿ ಮೂಲೆ ಗುಂಪಾಗಿದೆ. ಅದಕ್ಕೆ ಆತ್ಮವಲೋಕನ ಮಾಡಲು ನನಗೆ ಆಘಾತ ಆಗಿದೆ. ಅದನ್ನ ವಿಮರ್ಶೆ ಮಾಡಿಕೊಂಡು ಮತ್ತು ಪುಟಿದೇಳಬೇಕು. ಅನನ್ನೇಲ್ಲಾ ವಿಮರ್ಶೆ ಮಾಡಿಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ.
ನನ್ನ ಮಗನ ಹೆಸರು ಕ್ಷೇತ್ರದಲ್ಲಿ ಕೇಳಿ ಬಂದಿದ್ದಕ್ಕು ನನ್ನ ಸೋಲಿಗೂ ಯಾವುದೇ ಸಂಬಂಧ ಇಲ್ಲವೆಂದರು.

Leave a Reply

Your email address will not be published.

Social Media Auto Publish Powered By : XYZScripts.com