FIFA 2018 : ಚೊಚ್ಚಲ ಬಾರಿ ವಿಶ್ವಕಪ್ ಫೈನಲ್‍ಗೆ ಕ್ರೊವೇಷ್ಯಾ : ಇಂಗ್ಲೆಂಡ್ ತಂಡಕ್ಕೆ ನಿರಾಸೆ

ರಷ್ಯಾದ ಲುಝ್ನಿಕಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2-1 ಗೋಲುಗಳ ಅಂತರದಿಂದ ಜಯಗಳಿಸಿದ ಕ್ರೊವೇಷ್ಯಾ ಫಿಫಾ ವಿಶ್ವಕಪ್-2018 ಟೂರ್ನಿಯ ಫೈನಲ್ ತಲುಪಿದೆ. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಕ್ರೊವೇಷ್ಯಾ ತಂಡ ಇದೇ ಮೊದಲ ಬಾರಿ ಫೈನಲ್ ಗೆ ಅಡಿಯಿಟ್ಟಿದೆ.

ಪಂದ್ಯದ ಮೊದಲಾರ್ಧದ 5ನೇ ನಿಮಿಷದಲ್ಲಿಯೇ ಇಂಗ್ಲೆಂಡ್ ಪರವಾಗಿ ಡಿಫೆಂಡರ್ ಕೀರನ್ ಟ್ರಿಪ್ಪಿಯರ್ ಪ್ರಥಮ ಗೋಲ್ ದಾಖಲಿಸಿದರು. ಕೆಚ್ಚೆದೆಯ ಪ್ರದರ್ಶನ ತೋರಿದ ಕ್ರೊವೇಷ್ಯಾ ಪರವಾಗಿ ಮಿಡ್ ಫೀಲ್ಡರ್ ಇವಾನ್ ಪೆರಿಸಿಕ್ ಗೋಲ್ ಬಾರಿಸಿ ಸ್ಕೋರ್ ಸಮವಾಗಲು ಕಾರಣರಾದರು.

90 ನಿಮಿಷಗಳ ಮುಕ್ತಾದ ವೇಳೆಗೆ ಉಭಯ ತಂಡಗಳ ಸ್ಕೋರ್ 1-1 ರಿಂದ ಸಮಬಲಗೊಂಡಾಗ ಹೆಚ್ಚುವರಿ 30 ನಿಮಿಷಗಳ ಅವಧಿಗೆ ಆಟವನ್ನು ವಿಸ್ತರಿಸಲಾಯಿತು. ಬಳಿಕ 109ನೇ ನಿಮಿಷದಲ್ಲಿ ಫಾರ್ವರ್ಡ್ ಆಟಗಾರ ಮ್ಯಾರಿಯೊ ಮ್ಯಾಂಡ್ ಜುಕಿಕ್  ಗೋಲ್ ಗಳಿಸಿ ಕ್ರೊವೇಷ್ಯಾ ತಂಡಕ್ಕೆ ಮುನ್ನಡೆ ಒದಗಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com