Cricket : ಭಾರತ – ಇಂಗ್ಲೆಂಡ್ ಏಕದಿನ ಸರಣಿ : ಟ್ರೆಂಟ್‍ಬ್ರಿಡ್ಜ್ ಅಂಗಳದಲ್ಲಿಂದು ಮೊದಲ ಪಂದ್ಯ

ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಗುರುವಾರ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ತಂಡಗಳ ನಡುವೆ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಟಿ-20 ಸರಣಿಯನ್ನು 2-1 ರಿಂದ ಗೆದ್ದುಕೊಂಡಿರುವ ಭಾರತ ಮೊದಲ ಪಂದ್ಯವನ್ನು ಜಯಿಸಿ ಏಕದಿನ ಸರಣಿಯನ್ನು ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಇನ್ನೊಂದೆಡೆ ಟಿ-20 ಸರಣಿ ಸೋಲಿನ ಕಹಿ ಅನುಭವಿಸಿರುವ ಇಂಗ್ಲೆಂಡ್, ಏಕದಿನ ಸರಣಿಯಲ್ಲಿ ಭಾರತಕ್ಕೆ ತಿರುಗೇಟು ನೀಡುವ ತವಕದಲ್ಲಿದೆ.

ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿರುವ ಇಂಗ್ಲೆಂಡ್ 2ನೇ ಸ್ಥಾನದಲ್ಲಿರುವ ಭಾರತ ತಂಡಗಳ ನಡುವಿನ ಹಣಾಹಣಿ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಟಿ20ಯಲ್ಲಿ ಉತ್ತಮ ಪ್ರದರ್ಶನ ತೋರಿದ ಟೀಮ್ ಇಂಡಿಯಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಫಾರ್ಮ್ ನಲ್ಲಿದ್ದಾರೆ. ಭಾರತದ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಸಿಂಗ್ ಚಹಲ್ ಇಂಗ್ಲೆಂಡ್ ಬ್ಯಾಟ್ಸಮನ್ ಗಳನ್ನು ಕಟ್ಟಿಹಾಕಲು ಯತ್ನಿಸಲಿದ್ದಾರೆ.

ಪಂದ್ಯ ಭಾರತೀಯ ಕಾಲಮಾನದಂತೆ ಸಾಯಂಕಾಲ 5 ಗಂಟೆಗೆ ಪ್ರಾರಂಭವಾಗಲಿದೆ.

 

Leave a Reply

Your email address will not be published.