ಚಿಕ್ಕಮಗಳೂರು : ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತ : ಶಾಲಾ, ಕಾಲೇಜುಗಳಿಗೆ ರಜೆ

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಧಾರಕಾರ ಮಳೆ ಇಂದು ಸಹ‌ ಮುಂದುವರೆದಿದ್ದು ಜನಜೀವನ‌ ಅಕ್ಷರಶ: ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಮಲೆನಾಡು ಭಾಗವಾದ ಕೊಪ್ಪ, ಎನ್ ಆರ್ ಪುರ, ಬಾಳೆಹೊನ್ನೂರು, ಮೂಡಿಗೆರೆ ಸೇರಿಸಂತೆ ಚಿಕ್ಕಮಗಳೂರಿನಲ್ಲಿಯೂ ಮಳೆ ಮುಂದುವರೆದಿದೆ.

ಈ ಹಿನ್ನಲೆ ಮಲೆನಾಡು ತಾಲೂಕುಗಳಾದ ಎನ್ ಆರ್ ಪುರ, ಕೊಪ್ಪ, ಶೃಂಗೇರಿ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಇನ್ನು ನಿನ್ನೆ ಶೃಂಗೇರಿ ತಾಲೂಕಿನ‌ ಕೊಗ್ರೆಹಳ್ಳ ದಲ್ಲಿ ಕೊಚ್ಚಿಹೋದ ಅಶೋಕ್ ಮೃತದೇಹಕ್ಕಾಗಿ ಎನ್ ಡಿ ಆರ್ ಎಫ್ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ನಡೆಸಲಾಗತ್ತಿದೆ.

ಇನ್ಮು ಮಳೆಗೆ ತರೀಕೆರೆ ಪಟ್ಟಣದ ತುದಿಪೇಟೆಯಲ್ಲಿ ಎರಡು ಮನೆಗಳ ಗೋಡೆ ಕುಸಿದು ಬಿದ್ದಿದೆ. ಇನ್ನು ಜಿಲ್ಲೆಯ ತುಂಗಾ,ಭದ್ರಾ ನದಿಗಳು ಉಕ್ಕಿ ಹರಿಯುತ್ತಿದ್ದು ನದಿಪಾತ್ರದ ಜನಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚನೆ ನೀಡಿದೆ.

Leave a Reply

Your email address will not be published.

Social Media Auto Publish Powered By : XYZScripts.com