ಮೈಸೂರು : ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ : ದ್ವಿಚಕ್ರ ವಾಹನದ ಮೇಲಿದ್ದ ಅಣ್ಣ – ತಂಗಿ ಸಾವು

ರಸ್ತೆಯಲ್ಲಿ ನಿಂತಿದ್ದ ಲಾರಿಗೆ ದ್ವಿಚಕ್ರವಾಹನವೊಂದು ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಅಣ್ಣ-ತಂಗಿ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಮೃತರನ್ನು ತಾಲೂಕಿನ ಗೊರಳ್ಳಿ ಗ್ರಾಮದ, ಪಿರಿಯಾಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊರಳ್ಳಿ ಜಗದೀಶ್ ಅವರ ಮಕ್ಕಳಾದ ಅಮೋಘ(19), ಹಾಗೂ ಆತನ ಸಹೋದರಿ ಅಮೋಘವರ್ಷಿಣಿ(14) ಎಂದು ಗುರುತಿಸಲಾಗಿದೆ.

ಇವರು ನಿನ್ನೆ ಸಂಜೆ ಗೊರಳ್ಳಿ ಗ್ರಾಮದಿಂದ ಬೆಟ್ಟದಪುರದ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದಾಗ ಪಿರಿಯಾಪಟ್ಟಣ ರಸ್ತೆಯ ಮಂಜು ವೇಬ್ರಿಡ್ಜ್ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಇವರಿಬ್ಬರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Leave a Reply

Your email address will not be published.