ಉತ್ತರ ಕನ್ನಡ : ನಿಯಂತ್ರಣ ತಪ್ಪಿ ಉರುಳಿದ ಕಾರ್ : ಅರೆನಗ್ನ ಸ್ಥಿತಿಯಲ್ಲಿದ್ದ ನಾಲ್ವರಿಗೆ ಗಾಯ..

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಬಾಳೆಗುಳಿಯ ಬಳಿ ಕಾರ್ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ ಕಾರಿನಲ್ಲಿ ಅರೆಬೆತ್ತಲೆಯಾಗಿದ್ದ ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಖಾಸಗಿ ಕಂಪನಿಯ ಉದ್ಯೋಗಿಗಳಾದ ಕೊಲ್ಕತ್ತಾ ಮೂಲದವರಾದ ಬಿಸ್ವಾಸ್, ಶಿಲ್ಪಿ ಹಾಗೂ ಹೈದ್ರಾಬಾದನ ಶಿಕಾ, ಓರಿಸ್ಸಾದ ನೀರಜ್ ಗಾಯಗೊಂಡವರು.

ಇವರು ಕಳೆದ 2 ದಿನದ ಹಿಂದೆ ಗೋವಾಕ್ಕೆ ಪ್ರವಾಸಕ್ಕೆ ಬಂದು, ಅಲ್ಲಿಂದ ಬಾಡಿಗೆ ಕಾರನ್ನು ಪಡೆದು ಗೋಕರ್ಣ ಪ್ರವಾಸ ಮುಗಿಸಿ ಮರಳಿ ವಾಪಸ್ ಗೋವಾಕ್ಕೆ ಸಾಗುತ್ತಿದ್ದ ಸಂದರ್ಭದಲ್ಲಿ ಈ ಅಫಘಾತ ಸಂಭವಿಸಿದೆ. ಅಘಘಾತದ ಸಂದರ್ಭದಲ್ಲಿ ಎಲ್ಲ ಗಾಯಗೊಂಡ ಪ್ರಯಾಣಿಕರು ವಿವಸ್ತ್ರದಾರಿ ಗಳಾಗಿ ಇದ್ದದ್ದು ಕಂಡು ಬಂದಿದೆ.ಸ್ಥಳಕ್ಕಾಗಮಿಸಿದ 108 ನ ಸಿಬ್ಬಂದಿಗಳು ಮತ್ತು ಸ್ಥಳೀಯ ನಾಗರಿಕರು ಇವರಿಗೆ ಬಟ್ಟೆ ತೊಡಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.

 

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇವರು ಮಾದಕ ಪದಾರ್ಥ ಸೇವಿಸಿದ್ದರೆ ಎನ್ನುವುದರ ಕುರಿತು ಮತ್ತು ಕಾರಿನಲ್ಲಿದ್ದ ಯುವಕ-ಯವತಿಯರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

2 thoughts on “ಉತ್ತರ ಕನ್ನಡ : ನಿಯಂತ್ರಣ ತಪ್ಪಿ ಉರುಳಿದ ಕಾರ್ : ಅರೆನಗ್ನ ಸ್ಥಿತಿಯಲ್ಲಿದ್ದ ನಾಲ್ವರಿಗೆ ಗಾಯ..

Leave a Reply

Your email address will not be published.

Social Media Auto Publish Powered By : XYZScripts.com