2019 ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ‘ಹಿಂದೂ ಪಾಕಿಸ್ತಾನ’ ನಿರ್ಮಾಣವಾಗಲಿದೆ : ಶಶಿ ಥರೂರ್

‘ 2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ, ‘ಹಿಂದೂ ಪಾಕಿಸ್ತಾನ’ ದ ನಿರ್ಮಾಣವಾಗಲಿದೆ ‘ ಎಂದು ಕಾಂಗ್ರೆಸ್ ಮುಖಂಡ ಶಶಿ ಥರೂರ್ ಹೇಳಿದ್ದಾರೆ.

ಕೇರಳದ ತಿರುವನಂತಪುರಂ ನಗರದಲ್ಲಿ ಮಂಗಳವಾರ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ‘ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದರೆ ತನ್ನದೇ ಹೊಸ ಸಂವಿಧಾನ ರಚಿಸಲಿದ್ದು, ದೇಶದಲ್ಲಿ ಸಹಿಷ್ಣುತೆ ಹಾಗೂ ಏಕತಾ ಮನೋಭಾವನೆ ಕಡಿಮೆಯಾಗಲಿದೆ ‘ ಎಂದಿದ್ದಾರೆ.

Image result for Shashi Tharoor Hindu pakistan

 

‘ ಬಿಜೆಪಿಯ ಸಂವಿಧಾನ ಹಿಂದೂ ರಾಷ್ಟ್ರದ ಪರಿಕಲ್ಪನೆಗಳನ್ನು ಒಳಗೊಳ್ಳಲಿದೆ. ಅಲ್ಪಸಂಖ್ಯಾತರ ಸಮಾನತೆಯ ಹಕ್ಕನ್ನು ಕಸಿದುಕೊಳ್ಳಲಿದ್ದು, ಹಿಂದೂ ಪಾಕಿಸ್ತಾನವೊಂದರ ನಿರ್ಮಾಣವಾಗಲಿದೆ. ಮಹಾತ್ಮಾ ಗಾಂಧಿ, ನೆಹರೂ, ವಲ್ಲಭಬಾಯಿ ಪಟೇಲ್, ಮೌಲಾನಾ ಆಜಾದ್ ಮುಂತಾದವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಇಂತಹ ದೇಶದ ನಿರ್ಮಾಣಕ್ಕಾಗಿ ಅಲ್ಲ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com