FIFA 2018 : ವಿಶ್ವಕಪ್ ಫೈನಲ್‍ಗೆ ಲಗ್ಗೆಯಿಟ್ಟ ಫ್ರಾನ್ಸ್ : ಬೆಲ್ಜಿಯಂ ಚೊಚ್ಚಲ ಪ್ರಶಸ್ತಿ ಕನಸು ಭಗ್ನ

ಸೇಂಟ್ ಪೀಟರ್ಸ್ ಬರ್ಗ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಫ್ರಾನ್ಸ್ ಫೈನಲ್ ಗೆ ಲಗ್ಗೆಯಿಟ್ಟಿದೆ. ಇದರೊಂದಿಗೆ ಬೆಲ್ಜಿಯಂ ತಂಡದ ಚೊಚ್ಚಲ ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ.

ಫ್ರಾನ್ಸ್ ಪರವಾಗಿ ಡಿಫೆಂಡರ್ ಸ್ಯಾಮುಯೆಲ್ ಉಮ್ಟಿಟಿ ದ್ವೀತೀಯಾರ್ಧದ ಆಟದ ವೇಳೆ 51ನೇ ನಿಮಿಷದಲ್ಲಿ ಹೆಡರ್ ಮೂಲಕ ಗೋಲ್ ದಾಖಲಿಸಿ ಮುನ್ನಡೆ ಒದಗಿಸಿದರು. ಫ್ರಾನ್ಸಿನ ಗೋಲ್ ಕೀಪರ್ ಹ್ಯುಗೋ ಲಾರಿಸ್ ಅತ್ಯುತ್ತಮ ಪ್ರದರ್ಶನ ತೋರಿ ಬೆಲ್ಜಿಯಂ ಆಟಗಾರರ ಗೋಲ್ ಬಾರಿಸುವ ಪ್ರಯತ್ನಗಳನ್ನು ವಿಫಲವಾಗಿಸಿದರು.

ಬುಧವಾರ ಕ್ರೊವೇಷ್ಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಗೆಲ್ಲುವ ತಂಡ 15ರಂದು ನಡೆಯಲಿರುವ ಫೈನಲ್ ನಲ್ಲಿ ಪ್ರಶಸ್ತಿಗಾಗಿ ಫ್ರಾನ್ಸ್ ನೊಂದಿಗೆ ಸೆಣಸಾಡಲಿದೆ. 2006 ಫೈನಲ್ ಪಂದ್ಯದಲ್ಲಿ ಇಟಲಿ ವಿರುದ್ಧ ಪೆನಾಲ್ಟಿ ಶೂಟೌಟ್ ನಲ್ಲಿ ಸೋತು ನಿರಾಸೆ ಅನುಭವಿಸಿದ್ದ ಫ್ರಾನ್ಸ್ ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.

Leave a Reply

Your email address will not be published.

Social Media Auto Publish Powered By : XYZScripts.com