ಮಂಗಳೂರು : ರಾಜಕೀಯ ಚರ್ಚೆ ಹುಟ್ಟುಹಾಕಿದ ಮಾಜಿ ಸಚಿವ ಬಿ.ಎ ಮೊಹಿದೀನ್ ಆತ್ಮಚರಿತ್ರೆ..

ನನ್ನೊಳಗಿನ ನಾನು  : ಅನಾರೋಗ್ಯದಿಂದ ವಿಧಿವಶರಾದ ಮಾಜಿ ಸಚಿವ ಬಿ ಎ ಮೊಹಿದೀನ್ ಆತ್ಮಚರಿತ್ರೆ ನನ್ನೊಳಗಿನ ನಾನು ಕರಾವಳಿಯಲ್ಲಿ ಭಾರೀ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ತಮ್ಮ ಆತ್ಮ ಚರಿತ್ರೆಯಲ್ಲಿ ಅವರು ಉಲ್ಲೇಖಿಸಿರುವ ಹಲವು ವಿಚಾರಗಳು ರಾಜ್ಯ ಹಾಗೂ ಕರಾವಳಿ ರಾಜಕೀಯದ ಚಿತ್ರವಣವನ್ನು ಬಿಚ್ಚಿಟ್ಟಿದೆ.

ಅದರಲ್ಲೂ ತಮ್ಮ ರಾಜಕೀಯ ಪತನಕ್ಕೆ ಜಿಲ್ಲೆಯ ಮೂವರು ಪ್ರಭಾವಿ ಮುಖಂಡರುಗಳಾದ ಜನಾರ್ಧನ್ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಹಾಗೂ ವೀರಪ್ಪ ಮೊಯಿಲಿ ಕಾರಣ ಎಂದು ದಿವಂಗತ ಬಿ.ಎ ಮೊಹಿದೀನ್ ಅವರು ಉಲ್ಲೇಖ ಮಾಡಿದ್ದಾರೆ. ದೇವರಾಜ್ ಅರಸು ನಿಧನರಾದ ನಂತರ ನಾವೆಲ್ಲಾ ಇಂದಿರಾ ಕಾಂಗ್ರೆಸ್ ಸೇರಿದೆವು. 1983 ರ ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ಬಂಟ್ವಾಳದಿಂದ ಪುನಃ ಸ್ಪರ್ಧಿಸುವ ಅವಕಾಶ ನನಗೆ ನಿರಾಕರಿಸಲ್ಪಟ್ಟಿತು. ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಾಗಿ ಜನತಾ ಪಕ್ಷ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದು ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿಯಾದರು. 1985 ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಿತು. ಈ ಸಲವೂ ಜನಾರ್ಧನ್ ಪೂಜಾರಿ ಮತ್ತು ಆಸ್ಕರ್ ಫೆರ್ನಾಂಡಿಸ್ ನನಗೆ ಟಿಕೆಟ್ ಕೊಡದೆ ನನ್ನ ರಾಜಕೀಯ ಬದುಕನ್ನು ಒಂದು ಹಂತದಲ್ಲಿ ಸಾಯಿಸಿ ಬಿಟ್ಟರು ಎಂದು ಪುಸ್ತಕದಲ್ಲಿ ಉಲ್ಲೇಖಿಸಿಲಾಗಿದೆ.

ಅಲ್ದೆ  ಬಿವಿ ಕಕ್ಕಿಲಾಯ, ಗಂಗಾಧರ ಗೌಡ, ಪಿಎಫ್ ರೋಡ್ರಿಗಸ್, ಯುಟಿ ಫರೀದ್ ಬಿ. ಸುಬ್ಬಯ್ಯ ಶೆಟ್ಟಿ ಸೇರಿದಂತೆ ಹಲವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲ್ಲೆಯಲ್ಲಿ ಜ್ಯಾತ್ಯಾತೀತ, ಪ್ರಾಮಾಣಿಕ ಮತ್ತು ದಕ್ಷ ರಾಜಕೀಯ ಚರಿತ್ರೆಯನ್ನು ಬರೆದವರು. ಇವರಲ್ಲಿ ನನ್ನನ್ನು ಸಹಿತ ಕಾಂಗ್ರೆಸನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳಸಿದ ಅನೇಕ ನಾಯಕರ ರಾಜಕೀಯ ಬದುಕನ್ನು ಈ ಜನಾರ್ಧನ್ ಪೂಜಾರಿ ಎಂಬ ವ್ಯಕ್ತಿ ಸರ್ವನಾಶ ಮಾಡಿದರು. ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುವಾದಿ ರಾಜಕೀಯಕ್ಕೆ ಮುನ್ನುಡಿ ಬರೆದವರು ಈ ಜನಾರ್ಧನ್ ಪೂಜಾರಿ ಎಂಬ ಗಂಭೀರ ಆರೋಪವನ್ನು ಬಿ.ಎ ಮೊಹಿದೀನ್ ಅವರ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published.