ಧರ್ಮ ಒಡೆಯಲು ಹೋಗಿಯೇ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ : ರಂಭಾಪುರಿ ಶ್ರೀ

ವಿಜಯಪುರದ ನಿಡಗುಂದಿಯಲ್ಲಿ ರಂಭಾಪುರಿ ಶ್ರೀ ಹೇಳಿಕೆ ನೀಡಿದ್ದಾರೆ. ‘ ಮಾಜಿ ಸಿಎಂ ಸಿದ್ದರಾಮಯ್ಯಗೆ ಇವಾಗ ಬುದ್ದಿ ಬಂದಿದೆ. ಧರ್ಮ ಒಡೆಯುದಕ್ಕೆ ಹೋಗಿದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಯ್ತು ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಈ ಬುದ್ದಿ ಚುನಾವಣೆ ಪೂರ್ವದಲ್ಲಿ ಬರಬೇಕಿತ್ತು ‘ ಎಂದಿದ್ದಾರೆ.

‘ ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕ ಕೊಡುಗೆ ನೀಡಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಧ್ವನಿ ಕೇಳ್ತಾ ಇದೆ. ರೈತರ ಸಾಲಮನ್ನಾ ಮಾಡ್ತೇನಿ ಅಂತಾ ಸಿಎಂ ಕುಮಾರಸ್ವಾಮಿ ಹೇಳಿದ್ರು. ಆದ್ರೆ ಇಲ್ಲಿಯ ವರೆಗೂ ಸಾಲಮನ್ನಾ ಮಾಡಿಲ್ಲ ‘ ಎಂದಿದ್ದಾರೆ.

‘ ಅಧಿವೇಶನದಲ್ಲಿ ಕೇವಲ ವಾದ ವಿವಾದ ನಡೆಯುತ್ತಿವೆ. ಜಿಲ್ಲೆಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಬಾರದು. ಉತ್ತರ ಕರ್ನಾಟಕದ ರೈತರು ಕಷ್ಟದಲ್ಲಿ ಇದ್ದಾರೆ. ಜಾತಿ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡ್ತಾ ಇದ್ದಾರೆ. ಸ್ಥಾನ ಮಾನಗಳನ್ನು ನೀಡಬೇಕಾದ್ರು ಜಾತಿ ಆಧಾರ ಮೇಲೆ ಟಿಕೆಟ್ ಹಂಚಿಕೆ ಮಾಡ್ತಾ ಇದ್ದಾರೆ. ಯಾವುದೇ ಸರ್ಕಾರವಿರಲ್ಲಿ ಉನ್ನತ ಕೆಲಸ ಮಾಡಿಕೊಂಡು ಹೋಗಬೇಕು. ಅಭಿವೃದ್ಧಿಗಳು ಕುಂಠಿತವಾಗಬಾರದು ‘ ಎಂದು ಹೇಳಿದ್ದಾರೆ.

Leave a Reply

Your email address will not be published.