ಉತ್ತರಾಖಂಡ : ವರುಣನ ಆರ್ಭಟಕ್ಕೆ 7 ಜನ ಬಲಿ : ಕೊಚ್ಚಿ ಹೋದ ಸೇತುವೆಗಳು, ಶಾಲೆಗಳು ಬಂದ್

ಉತ್ತರಾಖಂಡ್ ರಾಜ್ಯದಲ್ಲಿ ಭಾರಿ ಮಳೆ ಸುರಿದಿದ್ದು, ವರುಣನ ಆರ್ಭಟಕ್ಕೆ 7 ನಾಗರಿಕರು ಬಲಿಯಾಗಿದ್ದಾರೆ. ಮೃತಪಟ್ಟ 7 ಜನರಲ್ಲಿ ನಾಲ್ವರು ರಾಜಧಾನಿ ಡೆಹ್ರಾಡೂನ್ ನಲ್ಲಿರುವ ಸೀಮಾದ್ವಾರ್ ಪ್ರದೇಶದಲ್ಲಿ ಕಟ್ಟಡವೊಂದು ಕುಸಿದು ಸಾವನ್ನಪ್ಪಿದ್ದಾರೆ. ದಲನ್ ವಾಲಾ, ಸಾಹಸ್ಪುರ್ ಹಾಗೂ ಬಲ್ಲಿವಾಲಾ ಪ್ರದೇಶಗಳಲ್ಲಿ ಮೂರು ಜನ ಮಳೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.

ಮಳೆಯ ರಭಸಕ್ಕೆ ನದಿಗಳಿಗೆ ಪ್ರವಾಹ ಉಕ್ಕಿಬಂದಿದ್ದು, ಕೆಲವು ಪ್ರದೇಶಗಳಲ್ಲಿ ಸೇತುವೆಗಳು ಕೊಚ್ಚಿ ಹೋಗಿವೆ. ಮುನ್ನೆಚ್ಚರಿಕೆಯ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದೆಲ್ಲೆಡೆ ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂಬ ವರದಿಯನ್ನು ಹವಾಮಾನ ಇಲಾಖೆ ನೀಡಿದೆ. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ.

 

2 thoughts on “ಉತ್ತರಾಖಂಡ : ವರುಣನ ಆರ್ಭಟಕ್ಕೆ 7 ಜನ ಬಲಿ : ಕೊಚ್ಚಿ ಹೋದ ಸೇತುವೆಗಳು, ಶಾಲೆಗಳು ಬಂದ್

Leave a Reply

Your email address will not be published.

Social Media Auto Publish Powered By : XYZScripts.com