ಮುಂದಿನ IPL ನಲ್ಲಿ ಆಡ್ತಾರಾ ಡಿವಿಲಿಯರ್ಸ್.? : RCB ಅಭಿಮಾನಿಗಳಿಗೆ ABD ಹೇಳಿದ್ದೇನು.?

ಕಳೆದ ಮೇ ತಿಂಗಳಲ್ಲಿ 11ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡಿದ ನಂತರ ಸೌತ್ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್, ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಟಿ-20, ಏಕದಿನ ಹಾಗೂ ಟೆಸ್ಟ್ ಮೂರೂ ಮಾದರಿಯ ಕ್ರಿಕೆಟ್ ನಿಂದ ನಿವೃತ್ತನಾಗುತ್ತಿರುವುದಾಗಿ ಡಿವಿಲಿಯರ್ಸ್ ತಿಳಿಸಿದ್ದರು.

ವಿಶ್ವದೆಲ್ಲೆಡೆ ಇರುವ ಕ್ರಿಕೆಟ್ ಅಭಿಮಾನಿಗಳಿಗೆ ಡಿವಿಲಿಯರ್ಸ್ ನಿವೃತ್ತಿಯ ನಿರ್ಧಾರ ಸಹಜವಾಗಿಯೇ ತೀವ್ರ ನಿರಾಸೆಯನ್ನು ಉಂಟು ಮಾಡಿತ್ತು. ನಿವೃತ್ತಿಯ ನಂತರ ಡಿವಿಲಿಯರ್ಸ್ ಐಪಿಎಲ್ ಟೂರ್ನಿಯಲ್ಲಿ ಆಡುವುದನ್ನು ಮುಂದದುವರೆಸುತ್ತಾರೆಯೇ ಎಂಬ ಪ್ರಶ್ನೆ ಆರ್ಸೀಬಿ ಅಭಿಮಾನಿಗಳಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಡಿವಿಲಿಯರ್ಸ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳ ಎದುರು ಮಾತನಾಡಿರುವ ಡಿವಿಲಿಯರ್ಸ್’ ಭವಿಷ್ಯದಲ್ಲಿ ಇನ್ನೂ ಕೆಲವು ವರ್ಷಗಳವರೆಗೆ ಐಪಿಎಲ್ ನಲ್ಲಿ ಆಡುತ್ತೇನೆ, ಟೈಟಾನ್ಸ್ ತಂಡದ ಪರವಾಗಿಯೂ ಆಡಲು ಬಯಸುತ್ತೇನೆ. ಆದರೆ ಯಾವುದೇ ಖಚಿತ ಯೋಜನೆಗಳನ್ನು ಹೊಂದಿಲ್ಲ, ತುಂಬ ದಿನಗಳಿಂದ ಇದನ್ನು ಹೇಳಲು ಬಯಸಿದ್ದೆ ‘ ಎಂದಿದ್ದಾರೆ.

 

 

Leave a Reply

Your email address will not be published.