ಟೀಮ್ ಇಂಡಿಯಾ & ರೋಹಿತ್ ಬಗ್ಗೆ ಮೆಚ್ಚುಗೆಯ ಟ್ವೀಟ್ : ಅಖ್ತರ್ ಮೇಲೆ ಸಿಟ್ಟಾದ ಪಾಕ್ ಫ್ಯಾನ್ಸ್..!

ಬ್ರಿಸ್ಟಲ್ ನಲ್ಲಿ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಗಳಿಂದ ಜಯಿಸಿದ ಭಾರತ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಇನ್ನೊಂದೆಡೆ ಪಾಕಿಸ್ತಾನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.

ಎರಡೂ ತಂಡಗಳಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದೊಂದಿಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಟ್ವೀಟ್ ಮಾಡಿದ್ದರು. ‘ ರೋಚಕ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಆಸ್ಟ್ರೇಲಿಯಾವನ್ನು ಮಣಿಸಿದೆ. ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ. ಉಪಖಂಡದ ತಂಡಗಳು ಮೇಲುಗೈ ಸಾಧಿಸುತ್ತಿವೆ. ರೋಹಿತ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಟಿ-20ಯಲ್ಲಿ 3 ಸೆಂಚುರಿ ಬಾರಿಸುವುದು ಸಾಮಾನ್ಯವಾದುದಲ್ಲ ‘ ಎಂದು ಅಖ್ತರ್ ಬರೆದುಕೊಂಡಿದ್ದರು.

ಶೋಯೆಬ್ ಅಖ್ತರ್ ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಕೆಲ ಪಾಕ್ ಅಭಿಮಾನಿಗಳನ್ನು ಕೆರಳಿಸಿದೆ. ರಿಪ್ಲೈ ಟ್ವೀಟ್ ಮಾಡಿರುವ ಕೆಲವರು ‘ ಆಸೀಸ್ ವಿರುದ್ಧ ಫೈನಲ್ ನಲ್ಲಿ ಉತ್ತಮ ಆಟವಾಡಿದ ಫಖರ್ ಜಮಾನ್ ಅವರ ಬಗ್ಗೆ ಅಖ್ತರ್ ಹೊಗಳಬೇಕಿತ್ತು ‘ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com